ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸರ್ಕಾರಿ ಬಸ್ ಅನ್ನೇ ಕಳ್ಳತನ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ನಡೆದಿದೆ…
ಭಾನುವಾರ ತಡರಾತ್ರಿ ಬಸ್ ಕದ್ದೊಯ್ದಿರುವ ಕಳ್ಳರು….ಡೀಸೆಲ್ ಕಳ್ಳತನ ಮಾಡಿ ಸಿ ಎಸ್ ಪುರ ಹೋಬಳಿಯ ಜನ್ನನಹಳ್ಳಿಯಲ್ಲಿ ಗಾಡಿ ಬಿಟ್ಟು ಪರಾರಿಯಾಗಿದ್ದಾರೆ.
ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೀಸೆಲ್ ರೇಟ್ ಸತತವಾಗಿ ಹೆಚ್ಚುತ್ತಿರುವುದರಿಂದ ಕದ್ದು ಮಾರಾಟ ಮಾಡಲು ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ..
ಬಸ್ ನಿಲ್ದಾಣದಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದಿರುವುದು ಮತ್ತು ಸಿಸಿಟೀವಿ ಅಳವಡಿಸದೆ ಇರುವುದೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಅಧಿಕಾರಿಗಳನ್ನ ಆರೋಪಿಸಿದ್ದಾರೆ.