ಹಿಂದಿ ರಾಷ್ಟ್ರಭಾಷೆ ಎಂದ ಜೊಮ್ಯಾಟೋ – ತರಾಟೆಗೆ ತೆಗೆದುಕೊಂಡ ತಮಿಳಿಗರು
ಹಿಂದಿ ನಮ್ಮ ರಾಷ್ಟ್ರ ಭಾಷೆ. ಎಲ್ಲರೂ ಸ್ವಲ್ಪವಾದರೂ ಹಿಂದಿಯನ್ನ ಕಲಿಯಬೇಕಾದದ್ದು ಸರ್ವೇ ಸಮಾನ್ಯ ಎಂದು ಜ್ಯೊಮ್ಯಾಟೋ ಫುಡ್ ಡಿಲೆವರಿ ಆಪ್….ತಮಿಳು ಗ್ರಾಹಕರ ಜೊತೆ ಚಾಟ್ ಮಾಡಿರುವ ಚಿತ್ರವೊಂದು ಈಗ ಸಾಕಷ್ಟು ವೈರಲ್ ಆಗಿದೆ.
ಜೊಮ್ಯೋಟೋ ತಮಿಳುನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರೆ ತಮಿಳು ಅರ್ಥವಾಗುವವರನ್ನೆ ನೀವು ಕಂಪನಿಗೆ ಸೇರಿಸಿಕೊಳ್ಳಿ ಎಂದು ಗ್ರಾಹಕ ಕೇಳಿದಾಗ ಜೊಮ್ಯಾಟೋ ಪುಡ್ ಡಿಲೆವರಿ ಸಂಸ್ಥೆ ಈ ರೀತಿಯಾಗಿ ಹೇಳಿಕೆ ಕೊಟ್ಟಿದೆ.
ಇದು ತಮಿಳಿಗರ ಕೋಪಕ್ಕೆ ಕಾರಣವಾಗಿದೆ.
ಇತ್ತೀಚಿಗೆ ಕೇಂದ್ರ ಸರ್ಕಾರಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಹಿಂದಿ ಭಾಷೆಯನ್ನ ದಕ್ಷಿಣ ಭಾರತೀಯರ ಮೇಲೆ ಬಲವಂತವಾಗಿ ಹೇರುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇದು #reject_zomato ಎಂಬ ಟ್ರೆಂಡಿಗ್ ನೊಂದಿಗೆ ಟ್ವೀಟರ್ ಅಲ್ಲಿ ವೈರಲ್ ಆಗಿದೆ. ಜೊಮ್ಯಾಟೋ ಆಪ್ ಅನ್ನು Uninstall ಮಾಡುವಂತೆ ಕಡಿಮೆ ರೇಟಿಂಗ್ ಕೊಡುವಂತೆ ಸೋಶಿಯಲ್ ಮೀಡಿಯಗಳಲ್ಲಿ ತಮಿಳಿಗರು ಒತ್ತಾಯಿಸುತ್ತಿದ್ದಾರೆ.