ನಾವು ಹೈಪರ್ ಸಾನಿಕ್ ವಾಹನದ ಪರೀಕ್ಷೆ ನಡೆಸಿದ್ದೇವೆ , ಕ್ಷಿಪಣಿ ಅಲ್ಲ – ಚೀನಾ
ಇತ್ತೀಚೆಗೆ ಕಪಟಿ ಚೀನಾ ಅತ್ಯಾಧುನಿಕ ಕ್ಷಿಪಣಿಯ ಪರೀಕ್ಷೆ ನಡೆಸಿದ್ದಾಗಿ ದಿ ಫೈನಾನ್ಷಿಯನ್ ಟೈಮ್ಸ್ ವರದಿ ಮಾಡಿತ್ತು. ಆದ್ರೆ ಇದಕ್ಕೆ ಖುದ್ದು ಚೀನಾ ಈಗ ಸ್ಪಷ್ಟನೆ ನಿಡಿದ್ದು, ನಾವು ಪರೀಕ್ಷೆ ಮಾಡಿದ್ದು ಹೈಪರ್ ಸಾನಿಕ್ ವಾಹನವನ್ನೇ ಹೊರತು ಕ್ಷಿಪಣಿಯನ್ನಲ್ಲ ಎಂದಿದೆ.
ಹೌದು ಚೀನಾ ಆಗಸ್ಟ್‌ನಲ್ಲಿ ಪರಮಾಣು ಸಾಮರ್ಥ್ಯವುಳ್ಳ ಹೈಪರ್ ಸಾನಿಕ್ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಉಡಾಯಿಸಿದೆ ಎಂದು ಈ ಹಿಂದೆ ವರದಿ ಮಾಡಲಾಗಿತ್ತು. ಕುರಿತು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾಹೊ ಲಿಜಿಯಾನ್ ಚೀನಾ ಹೈಪರ್ ಸಾನಿಕ್ ವಾಹನದ ಪರೀಕ್ಷೆ ನಡೆಸಿದೆ. ಅದನ್ನ ಕ್ಷಿಪಣಿ ಎಂದು ತಪ್ಪಾಗಿ ವರದಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.