ಮಹಿಳಾ ಶಿಕ್ಷಕಿಗೆ ಶೂಗಳಿಂದ ಥಳಿಸಿದ ಮುಖ್ಯ ಶಿಕ್ಷಕ….
ಶಾಲೆಯೊಂದರ ಮುಖ್ಯೋಪಾಧ್ಯಾಯರು ಮಹಿಳಾ ಶಿಕ್ಷಕಿಯೊಬ್ಬರಿಗೆ ಶೂಗಳಿಂದ ಹೊಡೆದಿರುವ ಘಟನೆ ಜೂನ್ 24 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದೆ. ಶಿಕ್ಷಕಿಯ ಮೇಲೆ ಶೂಗಳಿಂದ ಹಲ್ಲೆ ಮಾಡಿರುವ ವೀಡಿಯೋ ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ನಂತರ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ. ಕೆಲ ವಿಚಾರಕ್ಕೆ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕಿಯ ನಡುವೆ ವಾಗ್ವಾದ ನಡೆದಿದ್ದು, ಅದೇ ವಿವಾದ ವಿಕೋಪಕ್ಕೆ ತಿರುಗಿದೆ ಎಂದು ಹೇಳಲಾಗುತ್ತಿದೆ.
ಮುಖ್ಯೋಪಾಧ್ಯಾಯರಾದ ಅಜಿತ್ ಕುಮಾರ್ ಮತ್ತು ಮಹಿಳಾ ಶಿಕ್ಷಕಿ ಸೀಮಾ ದೇವಿ. ಇಬ್ಬರೂ ಮಹುಂಗು ಖೇಡಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಇಬ್ಬರ ನಡುವೆ ಕೆಲ ವಿಚಾರಕ್ಕೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದ್ದು, ಹೊಡೆದಾಟದ ಹಂತ ತಲುಪಿದೆ. ವಿಡಿಯೋದಲ್ಲಿ ಮುಖ್ಯ ಶಿಕ್ಷಕ ಸಹೋದ್ಯೋಗಿಯನ್ನ ಶೂಗಳಿಂದ ನಿರ್ದಯವಾಗಿ ಥಳಿಸಿದ್ದಾರೆ. ಇತರ ಶಾಲೆ ಸಿಬ್ಬಂದಿ ಜಗಳ ಬಿಡಿಸಲು ಯತ್ನಿಸುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.
ये कोई अखाड़े का मैदान नहीं शिक्षा का मंदिर है जहाँ प्राइमरी विद्यालय के शिक्षक ने एक महिला शिक्षामित्र की चप्पल से धुनाई कर दी।
बताया ज रहा है कि,उपस्थिति रजिस्टर में साइन को लेकर दोनो के बीच हुई बहस और फिर मारपीट।#lakhimpurkheri के मंहगूखेड़ा प्राथमिक विद्यालय का मामला। pic.twitter.com/INoO73dxmr
— Satyam Mishra/सत्यम् मिश्र (@satyammlive) June 24, 2022
ಹಲ್ಲೆ ಮಾಡಿದ ಮುಖ್ಯ ಶಿಕ್ಷಕ ಅಜಿತ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಶಿಕ್ಷಣಾಧಿಕಾರಿ ಲಕ್ಷ್ಮೀಕಾಂತ ಪಾಂಡೆ ತಿಳಿಸಿದ್ದಾರೆ.
ಮಾಹುಂಗು ಖೇಡಾ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಜಿತ್ ಕುಮಾರ್ ಮತ್ತು ಅದೇ ಶಾಲೆಯ ಶಿಕ್ಷಕಿ ಸೀಮಾದೇವಿ ನಡುವೆ ಬೆಳಿಗ್ಗೆ ಜಗಳ ನಡೆದಿತ್ತು. ಅಜಿತ್ ಅವರು ಶೂಗಳಿಂದ ಹಲ್ಲೆ ನಡೆಸಿದ್ದಾರೆ. ಆ ವಿಡಿಯೋ ನಮಗೆ ಸಿಕ್ಕಿದ ನಂತರ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಮತ್ತು ಸೀಮಾದೇವಿ ಅವರನ್ನ ಬೇರೆ ಶಾಲೆಗೆ ವರ್ಗಾಯಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಲಕ್ಷ್ಮೀಕಾಂತ ಪಾಂಡೆ ತಿಳಿಸಿದ್ದಾರೆ.








