2025ರ ವೇಳೆಗೆ 220 ಹೊಸ ವಿಮಾನ ನಿಲ್ದಾಣ ನಿರ್ಮಿಸುವ ಗುರಿ ಇದೆ – ಜ್ಯೋತಿರಾದಿತ್ಯ ಸಿಂಧಿಯಾ
2025 ರ ವೇಳೆಗೆ 220 ಹೊಸ ವಿಮಾನ ನಿಲ್ದಾಣಗಳನ್ನು ರಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ನಾಗರಿಕ ವಿಮಾನಯಾನ ಸಚಿವ ಇಂದು ಹೇಳಿದ್ದಾರೆ.
2022-23ಕ್ಕೆ ನಾಗರಿಕ ವಿಮಾನಯಾನ ಸಚಿವಾಲಯದ ಅನುದಾನದ ಬೇಡಿಕೆಗಳಿಗೆ ಉತ್ತರಿಸಿದ ಶ್ರೀ.ಸಿಂಧಿಯಾ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಾರತವು ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣದಲ್ಲಿ ಮುಂದಿದೆ ಎಂದು ಹೇಳಿದರು. ಮುಂದಿನ ವರ್ಷಗಳಲ್ಲಿ 133 ಹೊಸ ವಿಮಾನಗಳೊಂದಿಗೆ ಕಾರ್ಗೋ ವಿಮಾನಗಳನ್ನು 30% ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಇತ್ತೀಚಿನ ತಂತ್ರಜ್ಞಾನದೊಂದಿಗೆ ಪೈಲಟ್ ಪರವಾನಗಿಯನ್ನು ಸರಳೀಕರಿಸಲಾಗುವುದು ಎಂದು ಶ್ರೀ ಸಿಂಧಿಯಾ ಹೇಳಿದರು. 33 ಹೊಸ ದೇಶೀಯ ಕಾರ್ಗೋ ಟರ್ಮಿನಲ್‌ಗಳನ್ನು ರಚಿಸಲು ಸರ್ಕಾರ ಯೋಜಿಸಿದೆ, ಪೈಲಟ್‌ಗಳಿಗಾಗಿ 15 ಹೊಸ ವಿಮಾನ ತರಬೇತಿ ಶಾಲೆಗಳನ್ನು ಸ್ಥಾಪಿಸಲು, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು, ಡ್ರೋನ್ ವಲಯದ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದೆ ಎಂದು ಕಲಾಪದಲ್ಲಿ ತಿಳಿಸಿದರು.
ಐದು ದೇಶಗಳಿಗೆ ಕಳುಹಿಸಲಾದ 90 ವಿಮಾನಗಳು ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿವೆ ಎಂದು ಸಿಂಧಿಯಾ ಹೇಳಿದರು.
ವಿದ್ಯಾರ್ಥಿಗಳನ್ನ ಸ್ಥಳಾಂತರಿಸುವ ಸಮಯದಲ್ಲಿ 4 C17 ಗ್ಲೋಬ್ ಮಾಸ್ಟರ್ಸ್ ವಿಮಾನಗಳು ನಿರ್ವಹಿಸಿದ ರೀತಿಯನ್ನ ಕಂಡು ಸಿಂಧಿಯಾ ಭಾರತೀಯ ಪಡೆಗೆ ಧನ್ಯವಾದಗಳನ್ನು ಅರ್ಪಿಸಿದರು. ಇಡೀ ಪ್ರಕ್ರಿಯೆಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳು ನೀಡಿದ ಕೊಡುಗೆಯನ್ನು ಅವರು ಶ್ಲಾಘಿಸಿದರು. ಇಂಡಿಗೋ 35 ವಿಮಾನಗಳು, ಏರ್ ಇಂಡಿಯಾ 14, ಗೋ ಫಸ್ಟ್ 6, ಏರ್ ಏಷ್ಯಾ 3, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಸ್ಪೈಸ್‌ಜೆಟ್ ತಲಾ ಒಂಬತ್ತು ವಿಮಾನಗಳನ್ನು ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸಲು ಕಾರ್ಯಾಚರಣೆ ನಡೆಸಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.
Govt sets a target of creating 220 new airports by 2025 informs, Civil Aviation Minister Jyotiraditya Scindia in LS