ಪಂತ್ ಬದಲು ಕೆ.ಎಲ್.ರಾಹುಲ್ ಕೀಪಿಂಗ್ ಜವಾಬ್ದಾರಿ ನೀಡಬೇಕಾ..?

1 min read

ಪಂತ್ ಬದಲು ಕೆ.ಎಲ್.ರಾಹುಲ್ ಕೀಪಿಂಗ್ ಜವಾಬ್ದಾರಿ ನೀಡಬೇಕಾ..?

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ವಿಕೆಟ್‌ಕೀಪರ್‌ ರಿಷಬ್‌ ಪಂತ್‌ ಸತತ ವೈಫಲ್ಯ ಅನುಭವಿಸುತ್ತಿರುವ ಬೆನ್ನಲ್ಲೇ ಕೆಎಲ್‌ ರಾಹುಲ್‌ಗೆ ಕೆಎಲ್‌ ರಾಹುಲ್‌ಗೆ ಜವಾಬ್ದಾರಿ ನೀಡಬೇಕು ಎಂಬ ವ್ಯಾಪಕ ಕೂಗು ಕೇಳಿಬರುತ್ತಿದೆ.

ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್‌ ಗಂಭೀರ್‌ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಟೆಸ್ಟ್ ಮಾದರಿಯಲ್ಲಿ ವಿಕೆಟ್ ಕೀಪರ್ ಎಂದಿಗೂ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಬ್ಯಾಟಿಂಗ್‌ನಲ್ಲಿ ಸೂಪರ್ ಫಾರ್ಮ್‌ನಲ್ಲಿರುವ ರಾಹುಲ್ ಅವರನ್ನು ಅನಗತ್ಯವಾಗಿ ವಿಕೆಟ್ ಕೀಪಿಂಗ್‌ಗೆ ಎಳೆಯಬಾರದು ಎಂದು ಗಂಭೀರ್ ಸಲಹೆ ನೀಡಿದ್ದಾರೆ.

ಸ್ಪೆಷಲಿಸ್ಟ್ ಬ್ಯಾಟ್ಸ್ ಮೆನ್ ಆಗಿರುವ ರಾಹುಲ್ ಗೆ ಕೀಪಿಂಗ್ ಜವಾಬ್ದಾರಿ ವಹಿಸೋದು ಸೂಕ್ತವಲ್ಲ ಎಂದು ಗೌತಿ ಭಾವಿಸಿದ್ದಾರೆ.

gowtham gambhir- talks-kl-rahul-keeping saaksha tv

ಒಂದು ವೇಳೆ ರಾಹುಲ್ ಗೆ ಕೀಗ್ ಜವಾಬ್ದಾರಿ ನೀಡಿದ್ರೆ, ಅದು ತಂಡದ ಮೇಲೂ ಪರಿಣಾಮ ಬೀರಲಿದೆ ಎಂದು ಪ್ರತಿಪಾದಿಸಿದ್ದಾರೆ.

ಇತಿಹಾಸದಲ್ಲಿ ಯಾವ ವಿಕೆಟ್ ಕೀಪರ್ ಟೆಸ್ಟ್ ನಲ್ಲಿ ಆರಂಭಿಕರಾಗಿ ಮಿಂಚಿಲ್ಲ ಎಂದಿದ್ದಾರೆ.

 ಕೀಪಿಂಗ್ ಮಾಡುವ ಓಪನರ್ ಯಶಸ್ಸುಕಂಡದ್ದು ಏಕದಿನ, ಟಿ 20 ಯಲ್ಲಿ ನೋಡಿದ್ದೇವೆ. ಆದ್ರೆ ಟೆಸ್ಟ್ ನಂತಹ ಮಾದರಿಯಲ್ಲಿ ಅದು ಸಾಧ್ಯವಾಗದು.

ಉಪಖಂಡಗಳ ಪಿಚ್ ಗಳ ಮೇಲೆ ಸರಿಸಾರಿ ಒಂದು ತಂಡ 150 ಓವರ್ ಗಳ ಬ್ಯಾಟಿಂಗ್ ಮಾಡಿದ್ರೆ, ಕೀಪಿಂಗ್ ಮಾಡಿ ಮತ್ತೆ ಇನ್ನಿಂಗ್ಸ್ ಆರಂಭಿಸುವುದು ಅಸಾಧ್ಯವಾಗುತ್ತದೆ.

ಒಂದು ವೇಳೆ ರಿಷಬ್ ಪಂತ್ ಅವರನ್ನುಪಕ್ಕಕ್ಕೆ ಇಡುವ ಪರಿಸ್ಥಿತಿ ಬಂದರೇ ಮತ್ತೊಬ್ಬ ವಿಕೆಟ್ ಕೀಪರ್ ಗೆ ಚಾನ್ಸ್ ನೀಡಿ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd