ದಾವಣಗೆರೆ: ಕೊರೊನಾ ಭೀತಿಯ ನಡುವೆಯೂ ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಪರೀಕ್ಷೆ ನಡೆಸಿದ್ದ ದಾವಣಗೆರೆ ವಿಶ್ವವಿದ್ಯಾಲಯ ವಿಶೇಷ ದಾಖಲೆಯೊಂದನ್ನು ಮಾಡಿದೆ. ಪರೀಕ್ಷೆ ಮುಗಿದು 48 ಗಂಟೆಯಲ್ಲಿ ಮೌಲ್ಯಮಾಪನ ಮುಗಿಸಿ 2 ಗಂಟೆಯಲ್ಲೇ ಆನ್‍ಲೈನ್ ನಲ್ಲಿ ಫಲಿತಾಂಶ ಪ್ರಕಟಿಸಿದ ದಾಖಲೆಗೆ ದಾವಣಗೆರೆ ವಿಶ್ವವಿದ್ಯಾಲಯ ಪಾತ್ರವಾಗಿದೆ.
ದಾವಣಗೆರೆ ವಿವಿ ವ್ಯಾಪ್ತಿಯಲ್ಲಿ 121 ಕಾಲೇಜು, ಒಂದು ಸಂಯೋಜಿತ ಕಾಲೇಜು ಬರುತ್ತದೆ. ಎಲ್ಲಾ ಕಾಲೇಜುಗಳಿಗೂ ಪರೀಕ್ಷೆ ನಡೆಸಿ ಶೀಘ್ರ ಫಲಿತಾಂಶ ಪ್ರಕಟಿಸಲಾಗಿದೆ.
ಸ್ನಾತಕೋತ್ತರ(ಪಿಜಿ) ಪರೀಕ್ಷೆ ಬರೆದ 2211 ವಿದ್ಯಾರ್ಥಿಗಳಲ್ಲಿ ಶೇ.95% ಫಲಿತಾಂಶ ಬಂದಿದೆ. ಅಂತಿಮ ವರ್ಷದ ಪದವಿ ಪರೀಕ್ಷೆಯನ್ನು 44,651 ವಿದ್ಯಾರ್ಥಿಗಳು ಬರೆದಿದ್ದರು. ಕಲಾ ವಿಭಾಗದಲ್ಲಿ ಶೇ. 86%, ವಾಣಿಜ್ಯ 79%, ವಿಜ್ಞಾನ ವಿಭಾಗದಲ್ಲಿ ಶೇ. 62 % ಫಲಿತಾಂಶ ಬಂದಿದೆ.
ಸೆಪ್ಟೆಂಬರ್.14ರಿಂದ ಪರೀಕ್ಷೆ ಆರಂಭವಾಗಿತ್ತು. ಪರೀಕ್ಷೆ ಮುಗಿದ ನಂತರ ವಿವಿಯ ಪ್ರಾಧ್ಯಾಪಕರು, ಕಾಲೇಜುಗಳ ಉಪನ್ಯಾಸಕರ ಪರಿಶ್ರಮದಿಂದ ಫಲಿತಾಂಶ ಶೀಘ್ರ ನೀಡಲು ಸಾಧ್ಯವಾಗಿದೆ. ಎಲ್ಲರ ಶಿಕ್ಷಕರು, ಪ್ರಾಧ್ಯಾಪಕರ ಸಹಕಾರದಿಂದ ಅಂತಿಮ ವರ್ಷದ ಪರೀಕ್ಷೆಗಳ ಫಲಿತಾಂಶವನ್ನು ಮೌಲ್ಯಮಾಪನ ಮುಗಿದ 2 ಗಂಟೆಗಳಲ್ಲೇ ನೀಡಲಾಗಿದೆ. ಕೊರೊನಾ ಸಂಕಷ್ಟದ ನಡುವೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತಕ್ಷಣ ಫಲಿತಾಂಶ ನೀಡಿದರೆ ಖುಷಿಯಾಗುತ್ತದೆ ಎಂಬುದನ್ನು ಮನಗಂಡು ಸಿಬ್ಬಂದಿಗಳ ಸಹಕಾರದಿಂದ ಈ ಪ್ರಯತ್ನ ಆಗಿದೆ. ಕಳೆದ ಎರಡು ವರ್ಷಗಳಿಂದ ಯಾವುದೇ ಫಲಿತಾಂಶವನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಕುಲಪತಿ ಡಾ.ಶರಣಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ತಂತ್ರಜ್ಞಾನ ಸೌಲಭ್ಯ, ಸಂಪನ್ಮೂಲ ಸದ್ಬಳಕೆ ಮಾಡಿಕೊಂಡು ದಾಖಲೆ ಅವಧಿಯಲ್ಲಿ ಫಲಿತಾಂಶ ನೀಡಿದ್ದು, ದಾವಣಗೆರೆ ವಿಶ್ವವಿದ್ಯಾಲಯದ ಸಾಧನೆಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋವಿಡ್ ನಮ್ಮನ್ನು ಹಿಮ್ಮೆಟ್ಟಿಸದು ಎಂಬುದಕ್ಕೆ ದಾವಣಗೆರೆ ವಿಶ್ವವಿದ್ಯಾಲಯದ ವಿಶೇಷ ಸಾಧನೆಯೇ ಸಾಕ್ಷಿಯಾಗಿದೆ. ಎರಡು ದಿನದಲ್ಲೇ ಡಿಜಿಟಲ್ ಅಂಕ ಪ್ರಕಟಿಸಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಪ್ರಕಟಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟ ವಿವಿಯ ಸಾಧನೆಯನ್ನು ಶ್ಲಾಘಿಸುತ್ತೇನೆ. ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ ಎಂದು ಡಿಸಿಎಂ ಶ್ಲಾಘಿಷಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel