ಕೋಲಾರದಲ್ಲಿ ವೀಕೆಂಡ್ ಕರ್ಪ್ಯೂಗೆ ಉತ್ತಮ ಪ್ರತಿಕ್ರಿಯೆ
1 min read
ಕೋಲಾರದಲ್ಲಿ ವೀಕೆಂಡ್ ಕರ್ಪ್ಯೂಗೆ ಉತ್ತಮ ಪ್ರತಿಕ್ರಿಯೆ Saaksha Tv
ಕೋಲಾರ: ಕೊರೊನಾ ಹೆಚ್ಚುತ್ತಿರುವುದರಿಂದ ವೀಕೆಂಡ್ ಕರ್ಪ್ಯೂಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬಸ್ ನಿಲ್ದಾಣಗಳಲ್ಲಿ ಹಾಗೂ ರಸ್ತೆಗಳಲ್ಲಿ ಜನರಿಲ್ಲದೆ ಖಾಲಿ ಖಾಯಾಗಿ ಕಾಣುತ್ತಿದೆ. ಬೆಳಿಗ್ಗೆ ಹತ್ತು ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರು ಜನರು ಹೊರಗೆ ಬಂದಿಲ್ಲ.
ಅಲ್ಲದೇ ತರಕಾರಿ ಮಾರುಕಟ್ಟೆಗಳು ಕೂಡ ಜನರಿಲ್ಲದೆ ಬಿಕೊ ಎನ್ನುತ್ತಿವೆ. ವ್ಯಾಪಾರವಿಲ್ಲದೆ ಹಣ್ಣಿನ ಅಂಗಡಿಗಳು ಖಾಲಿ ಹೊಡೆಯುತ್ತಿವೆ. 10 ಗಂಟೆಯ ನಂತರ ಕೇವಲ ತುರ್ತು ಸೇವೆಗಳು ಹಾಗೂ ಮೆಡಿಕಲ್ ಸೇವೆಗಳಿಗೆ ಮಾತ್ರ ಅವಕಾಶ ನೀಡಿದ್ದು, ಹೋಟೆಲ್ ಗಳಲ್ಲಿ ಪಾರ್ಸ್ಲ್ ಗೆ ಮಾತ್ರ ಅನುಮತಿ ನೀಡಲಾಗಿದೆ.