ಬ್ಯಾಂಕಾಕ್: ಥೈಲ್ಯಾಂಡ್ ನಲ್ಲಿ (Thailand) ವಿವಾಹ ಸಮಾನತೆಯ ಮಸೂದೆ ಅಂಗೀಕಾರಗೊಂಡಿದ್ದು, ಸಲಿಂಗಿಗಳು ಕಾನೂನಾತ್ಮಕವಾಗಿ ವಿವಾಹವಾಗಬಹುದು ಎನ್ನಲಾಗಿದೆ.
ರಾಜ ಮಹಾ ವಜಿರಾಲಾಂಗ್ ಕಾರ್ನ್ ಈ ಮಸೂದೆ ಅಂಗೀಕರಿಸಿದ್ದು, ಕಾನೂನನ್ನು ರಾಯಲ್ ಗೆಜೆಟ್ನಲ್ಲಿ ಪ್ರಕಟಿಸಲಾಗಿದೆ. ಈ ಕಾನೂನು ಜಾರಿಯ ನಂತರ LGBTQ+ ಜೋಡಿಗಳು ಮುಂದಿನ ವರ್ಷದ ಜನವರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿಕೊಳ್ಳಲು ಆರಂಭಿಸಲಾಗಬಹುದು. ತೈವಾನ್ ಮತ್ತು ನೇಪಾಳದ ನಂತರ ಸಲಿಂಗ ವಿವಾಹವನ್ನು ಅನುಮತಿಸಿದ ಏಷ್ಯಾದ ಮೂರನೇ ರಾಷ್ಟ್ರ ಥೈಲ್ಯಾಂಡ್ ಆಗಿದೆ.
ಯಾವುದೇ ಲಿಂಗದ ವಿವಾಹ ಪಾಲುದಾರರಿಗೆ ಸಂಪೂರ್ಣ ಕಾನೂನು, ಆರ್ಥಿಕ ಮತ್ತು ವೈದ್ಯಕೀಯ ಹಕ್ಕುಗಳನ್ನು ನೀಡುವ ಮಸೂದೆಯು ಏಪ್ರಿಲ್ ಮತ್ತು ಜೂನ್ನಲ್ಲಿ ಕ್ರಮವಾಗಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಎರಡರಲ್ಲಿಯೂ ಅನುಮೋದನೆ ಸಿಕ್ಕಿದೆ.
ಥೈಲ್ಯಾಂಡ್ ವಿವಾಹ ಸಮಾನತೆಯ ಕಾನೂನು ಜಾರಿಗೊಳಿಸಲು ಹೆಣಗಾಡಿತ್ತು. ಅಲ್ಲಿನ ಥಾಯ್ ಸಮಾಜ ಹೆಚ್ಚಾಗಿ ಸಂಪ್ರದಾಯವಾದಿ ಮೌಲ್ಯಗಳನ್ನು ಹೊಂದಿದೆ. ಇದಕ್ಕೆ ಹಲವರು ಸಂಭ್ರಮಿಸಿದ್ದಾರೆ.