ಕದನದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಶತೃಗಳ ಶರಣಾಗತಿ ನೋಡುವುದೇ ಗುರಿ ಎಂದು ಇಸ್ರೇಲ್ ಹೇಳಿದೆ.
ಈಗಾಗಾಗಲೇ ಎರಡೂ ದೇಶಗಳ ನಡುವಿನ ಕಿತ್ತಾಟ ಬಲು ಜೋರಾಗಿ ಸಾವಿರಾರು ಜನರು ಹೆಣವಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಇಸ್ರೇಲ್ ನ ವಿರುದ್ಧ ಮಧ್ಯಪ್ರಾಚ್ಯದ ದೇಶಗಳೆಲ್ಲಾ ಒಂದಾಗಿ ಯುದ್ಧ ಸಾರುವ ಭಯ ಕೂಡ ಈಗ ಶುರುವಾಗಿದೆ.
ಅಮೆರಿಕ ಮತ್ತು ಫ್ರಾನ್ಸ್ ಎರಡೂ ಸೇರಿ ಇಸ್ರೇಲ್ ಜೊತೆ ಮಾತನಾಡಿ ಯುದ್ಧಕ್ಕೆ ತೀಲಾಂಜಲಿ ಹಾಡಲು ಮುಂದಾಗಿದ್ದವು. ಆದರೆ, ಇಸ್ರೇಲ್ ಮಾತ್ರ ಯುದ್ಧದಿಂದ ಹಿಂದೆ ಸರಿಯುತ್ತಿಲ್ಲ. ಸುಮಾರು ಒಂದು ವರ್ಷದಿಂದ ಇಬ್ಬರ ನಡುವೆ ಘೋರ ಕಾಳಗ ನಡೆಯುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಲೆಬನಾನ್ ಮತ್ತು ಸಿರಿಯಾ ವಿರುದ್ಧ ಕೂಡ ಇಸ್ರೇಲ್ ದಾಳಿ ಮಾಡುತ್ತಿದೆ.
ಇರಾನ್ ಕೂಡ ಈಗ ಅಖಾಡಕ್ಕೆ ಧುಮುಕುತ್ತಿದೆ. ಅದು ಕೂಡ ಇಸ್ರೇಲ್ ವಿರುದ್ಧ ಗುಡುಗಲು ಮುಂದಾಗಿದೆ. ಹೀಗಾಗಿ ಇಸ್ರೇಲ್‌ಗೆ ಬುದ್ಧಿ ಹೇಳಿ ಕದನ ವಿರಾಮ ಘೋಷಣೆ ಮಾಡಲು ಅಮೆರಿಕ ಹಾಗೂ ಫ್ರಾನ್ಸ್ ಮುಂದಾಗಿದ್ದವು. ಆದರೆ, ಅದು ಫಲ ನೀಡಿಲ್ಲ.
ಇಸ್ರೇಲ್ ಈಗ ತೊಡೆತಟ್ಟಿ ನಿಂತಿದ್ದು, ಏನೇ ಆದರೂ ಶತ್ರುಗಳು ಉಳಿಯಬಾರದು ಎಂದು ತೊಡೆ ತಟ್ಟಿದೆ.
ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರಟ್, ಇಸ್ರೇಲ್ & ಹಿಜ್ಬುಲ್ಲಾ ನಡುವೆ 21 ದಿನಗಳ ಕದನ ವಿರಾಮ ಘೋಷಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದರು. ಆದರೆ ಈಗ ನೋಡಿದರೆ ಇಸ್ರೇಲ್ ಈ ಆಹ್ವಾನ ತಿರಸ್ಕರಿಸಿದೆ ಎಂದು ಹೇಳಲಾಗುತ್ತಿದೆ.