ಬೀದಿಯಲ್ಲೇ ಹೊಡೆದಾಡಿಕೊಂಡ ಮದುವೆಗೆ ಬಂದ ಅತಿಥಿಗಳು – Saaksha Tv
ಸಿಡ್ನಿ (ಆಸ್ಟ್ರೇಲಿಯಾ): ಮದುವೆಗೆ ಬಂದ ಅತಿಥಿಗಳು ಎನ್ನಲಾಗಿರುವ ಕೆಲವು ವ್ಯಕ್ತಿಗಳು ಗುಂಪು ಗಲಾಟೆ ಮಾಡಿಕೊಂಡ ಘಟನೆ ಆಸ್ಟ್ರೇಲಿಯಾದ ಮಾಸ್ಮನ್ನಲ್ಲಿರುವ ದಿ ಸ್ಪಿಟ್ನಲ್ಲಿ ನಡೆದಿದೆ.
ಬೀದಿಯಲ್ಲಿ ಗುಂಪೊಂದು ಒಬ್ಬರಿಗೊಬ್ಬರು ತಳ್ಳಾಡಿ, ನೂಕಾಡಿ ಹೊಡೆದಾಡಿಕೊಂಡಿದ್ದಾರೆ. ಮದುವೆಗೆ ತಯಾರಾಗಿ ಬಂದ ಸೂಟ್ ಮತ್ತು ಡ್ರೆಸ್ ಧರಿಸಿದ ವ್ಯಕ್ತಿಗಳು ದಾರಿಯಲ್ಲಿಯೇ ಬಡಿದಾಡಿಕೊಂಡಿದ್ದು, ಗಂಭೀರ ಗಾಯಗಳಾಗಿವೆ. ಸದ್ಯ ಈ ವಿಡಿಯೊ ಆಸ್ಟ್ರೇಲಿಯಾದಲ್ಲಿ ವೈರಲ್ ಆಗಿದೆ.
ಗಂಡಸರು, ಹೆಂಗಸರನ್ನು ಒಳಗೊಂಡ ಗುಂಪಿನ ಗಲಾಟೆ ಅತಿರೇಖಕ್ಕೆ ಹೋಗಿದ್ದು, ಸ್ಥಳದಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಪೋಲಿಸರು ಬರುವಷ್ಟರಲ್ಲಿ ಗಲಾಟೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಸುಮಾರು ಹದಿನೈದರಿಂದ ಇಪ್ಪತ್ತು ಜನರು ಪರಸ್ಪರ ಹಲ್ಲೆ ಮಾಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.








