Gujarat : ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ 6 ತಿಂಗಳ ಬಳಿಕ ಮದುವೆ ಮಾಡಿದ ಕಟುಂಬಸ್ಥರು – ಹೇಗೆ ಗೊತ್ತಾ ?
ಪ್ರೇಮ ವಿವಾಹಕ್ಕೆ ಕುಟುಂಬದವರು ಒಪ್ಪಿಗೆ ನೀಡಲಿಲ್ಲ ಎಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವನ್ನಪ್ಪಿದ 6 ತಿಂಗಳ ಬಳಿಕ ಎರಡೂ ಕುಟುಂಬದವರು ಪಶ್ಚಾತಾಪ ಪಟ್ಟು ತಮ್ಮ ತಪ್ಪನ್ನ ತಿದ್ದಿಕೊಂಡೊಡಿದ್ದು ಮೃತ ಪ್ರೇಮಿಗಳಿಬ್ಬರ ಮೂರ್ತಿಗಳನ್ನ ನಿರ್ಮಿಸಿ ಮದುವೆ ಮಾಡಿಕೊಟ್ಟಿದ್ದಾರೆ. ಗುಜರಾತಿನ ತಾಪಿ ಜಿಲ್ಲೆಯಲ್ಲಿ ನಿಜರ ತಾಲೂಕಿನ ನೇವಾಳ ಗ್ರಾಮದಲ್ಲಿ ವಿಚಿತ್ರ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಈ ವಿಷಯ ಇದೀಗ ಇಂಟರ್ ನೆಟ್ ನಲ್ಲಿ ಚರ್ಚೆಯ ವಿಷಯವಾಗಿದೆ.
ಕಳೆದ ವರ್ಷ ಗಣೇಶ ಪದ್ವಿ ಮತ್ತು ರಂಜನಾ ಪದ್ವಿ ಅವರ ಪ್ರೇಮ ವಿವಾಹಕ್ಕೆ ಕುಟುಂಬದವರು ಒಪ್ಪಿಗೆ ನೀಡಿರಲಿಲ್ಲ. ಪ್ರಾಣ ಕಳೆದುಕೊಂಡ ಹುಡುಗ ಹಾಗೂ ಹುಡುಗಿ ದೂರದ ಸೋದರ ಸಂಬಂಧಿಗಳಾಗಿದ್ದ ಕಾರಣದಿಂದ ಅವರಿಬ್ಬರ ಮದುವೆಗೆ ಎರಡೂ ಮನೆಯವರು ಒಪ್ಪಿಗೆ ನೀಡಿರಲಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಪ್ರೇಮಿಗಳು ನಿರಾಶೆಗೊಂಡಿದ್ದರು. ಇದರೊಟ್ಟಿಗೆ ಕುಟುಂಬಗಳಲ್ಲಿ ಅವ್ಯಾಚ ಮಾತುಗಳು, ಅಪಹಾಸ್ಯದ ಮಾತುಗಳಿಂದ ನೊಂದಿದ್ದ ಪ್ರೇಮಿಗಳು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದರಿಂದ ಎರಡೂ ಕುಟುಂಬಗಳು ದುಃಖದಲ್ಲಿ ಮುಳುಗಿದವು. ನಂತರ ತಮ್ಮ ತಪ್ಪುಗಳನ್ನು ಅರಿತುಕೊಂಡು ಪಶ್ಚಾತ್ತಾಪ ಪಟ್ಟ ಕುಟುಂಬಗಳು ಇಬ್ಬರು ಪ್ರೇಮಿಗಳ ಪ್ರತಿಮೆಗಳನ್ನ ನಿರ್ಮಿಸಿ ಬುಡಕಟ್ಟು ಸಂಪ್ರದಾಯದಂತೆ ವಿವಾಹ ಮಾಡಿದ್ದಾರೆ. ಜನವರಿ 14 ರಂದು ಈ ಮದುವೆ ನಡೆದಿದೆ.
Gujarat : 6 months after lovers die by suicide, families get their statues married