Gujarat – 375 ಕೋಟಿ ಮೌಲ್ಯದ 75 ಕೆಜಿ ಹೆರಾಯಿನ್ ಮುಂದ್ರಾ ಬಂದರಿನಲ್ಲಿ ವಶಕ್ಕೆ…
ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಪಂಜಾಬ್ ಪೊಲೀಸರು ಮತ್ತು ಕೇಂದ್ರ ಏಜೆನ್ಸಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಂದಾಜು 375 ಕೋಟಿ ರೂ. ಮೌಲ್ಯದ 75 ಕೆಜಿ ಹೆರಾಯಿನ್ ಅನ್ನು ಕಚ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಹೊಲಿಗೆ ಹಾಕದ ಬಟ್ಟೆಗಳನ್ನು ಸಾಗಿಸುವ ಕಂಟೈನರ್‌ನಲ್ಲಿ ಹೆರಾಯಿನ್ ಬಚ್ಚಿಡಲಾಗಿತ್ತು ಎಂದು ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಂಗಳವಾರ ಚಂಡೀಗಢದಲ್ಲಿ ತಿಳಿಸಿದ್ದಾರೆ. Gujarat – 75 kg heroin, worth Rs 375 crore, seized from container at Mundra port
“ಪಂಜಾಬ್ ಪೊಲೀಸರ ಸುಳಿವಿನ ಆಧಾರದ ಮೇಲೆ, ಹಡಗಿನ ಕಂಟೈನರ್ ಗಳನ್ನ ಶೋಧಿಸಿದಾಗ ದುಬೈನಿಂದ ಆಗಮಿಸಿದ್ದ ಕಂಟೇನರ್ ನಲ್ಲಿ ಸುಮಾರು 75 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಜರಾತ್ ಎಟಿಎಸ್ ಡಿಐಜಿ ದಿಪೇನ್ ಭದ್ರನ್ ಹೇಳಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಸಮ್ಮುಖದಲ್ಲಿ ಸರಕುಗಳನ್ನು ತೆರೆಯಲಾಯಿತು.
ಭಾರತವೇ ಮುಂಚೂಣಿಯಲ್ಲಿರುವ ಜವಳಿ ರಫ್ತುದಾರನಾಗಿರುವುದರಿಂದ, ದುಬೈನಿಂದ ಬಟ್ಟೆಗಳನ್ನು ಏಕೆ ಆಮದು ಮಾಡಿಕೊಳ್ಳಬೇಕು ಎಂದು ಪೊಲೀಸರಿಗೆ ಅನುಮಾನ ಶುರುವಾಗಿ ತಪಾಸಣೆ ನಡೆಸಿದಾಗ, ಎಟಿಎಸ್ ಸಿಬ್ಬಂದಿ ಕಂಟೈನರ್‌ಗಳಿಂದ ಹೆರಾಯಿನ್ ಡ್ರಗ್ಸ್ ಅನ್ನು ಪತ್ತೆಹಚ್ಚಿದ್ದಾರೆ.