Gujarat Election : 1985 ಕಾಂಗ್ರೆಸ್ ದಾಖಲೆ ಮುರಿದ ಭಾಜಪ….
ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೀಗ ನಿಧಾನವಾಗಿ ಸ್ಪಷ್ಟವಾಗುತ್ತಿದೆ. 182 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನಗಳನ್ನ ಗೆಲ್ಲುವ ಮೂಲಕ ಗುಜರಾತ್ ಎಲೆಕ್ಷನ್ ಇತಿಹಾಸದಲ್ಲಿ ಹೊಸ ಐತಿಹಾಸಿಕ ದಾಖಲೆಯನ್ನ ಬರೆದಿದೆ.
1985 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾಧವ್ ಸಿಂಗ್ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್ 149 ವಿಧಾನಸಭಾ ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಆನಂತರ ನರೇಂದ್ರ ಮೋದಿ ಸಿ ಎಂ ಆಗಿದ್ದಾಗ 2002 ರಲ್ಲಿ ಬಿಜೆಪಿ 127 ಸ್ಥಾನಗಳನ್ನ ಗೆದ್ದಿತ್ತು. ಈ ಗೆಲುವಿನೊಂದಿಗೆ ಬಿಜೆಪಿ ಎರಡೂ ದಾಖಲೆಗಳನ್ನ ಮುರಿದಿದೆ.
ಕುತೂಹಲದ ಸಂಗತಿಯೆಂದರೇ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಹೇಳಿಕೆಯೊಂದನ್ನ ನೀಡಿದ್ದರು. ಭೂಪೇಂದ್ರ ಅವರು ನರೇಂದ್ರ ಅವರ ದಾಖಲೆಯನ್ನ ಮುರಿಯುತ್ತಾರೆ ಎಂಬ ಹೇಳಿಕೆ ನೀಡಿದ್ದರಿ ಅದರಂತೆ ಚುನಾವಣ ಫಲಿತಾಂಶದಲ್ಲಿಸ್ಪಷ್ಟವಾಗಿ ಗೋಚರಿಸಿದೆ.
Gujarat Election: 1985 Congress broke BJP’s record…