Gujarat Election : ಮಧ್ಯಾಹ್ನ 3 ಗಂಟೆಯವರೆಗೆ ಶೇ.48.48ರಷ್ಟು ಮತದಾನ
ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಇಂದು ರಾಜ್ಯದ 89 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಮಧ್ಯಾಹ್ನ 3 ಗಂಟೆಯವರೆಗೆ ಶೇ.48.48ರಷ್ಟು ಮತದಾನವಾಗಿದೆ. ತಾಪಿಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಅತಿ ಹೆಚ್ಚು ಶೇಕಡ 64.27% ಮತ್ತು ಜಾಮ್ನಗರದಲ್ಲಿ ಕನಿಷ್ಠ 46.03% ಮತದಾನವಾಗಿದೆ. ನಿಧಾನಗತಿಯ ಮತದಾನ ಅಭ್ಯರ್ಥಿಗಳ ಟೆನ್ಷನ್ ಹೆಚ್ಚಿಸಿದೆ. ಎಲ್ಲ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಬೂತ್ಗೆ ಕರೆತರುವಲ್ಲಿ ನಿರತರಾಗಿದ್ದಾರೆ.
ಐಡಿ ಮರೆತುಬಂದ ಎಎಪಿಯ ಸಿಎಂ ಅಭ್ಯರ್ಥಿ
ದ್ವಾರಕಾದ ಖಂಭಾಲಿಯಾದಲ್ಲಿ ಮತ ಚಲಾಯಿಸಲು ಬಂದಿದ್ದ ಎಎಪಿ ಸಿಎಂ ಅಭ್ಯರ್ಥಿ ಮನೆಯಲ್ಲಿ ಐ-ಕಾರ್ಡ್ ಮರೆತು ಬಂದು ಬಿಟ್ಟಿದ್ದರು. ಇದರಿಂದಾಗಿ ಅವರು 45 ನಿಮಿಷಗಳ ಕಾಲ ಕಾದು ಮತ ಚಲಾಯಿಸಿದರು.
ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಜಾಮ್ನಗರ-ಉತ್ತರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಆದರೆ, ವೋಟರ್ ಐಡಿಯಲ್ಲಿ ಅವರ ಹೆಸರು ರಾಜ್ಕೋಟ್ ನಲ್ಲಿರುವ ಕಾರಣ ರವೀಂದ್ರ ಜಡೇಜಾ ಅವರೊಂದಿಗೆ ರಾಜ್ಕೋಟ್ನಲ್ಲಿ ಮತ ಚಲಾಯಿಸಿದರು.
788 ಅಭ್ಯರ್ಥಿಗಳು ಕಣದಲ್ಲಿ
ರಾಜ್ಯದ 19 ಜಿಲ್ಲೆಗಳ ಈ ಸ್ಥಾನಗಳಿಗೆ 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದಲ್ಲಿ ಎರಡು ಕೋಟಿಗೂ ಹೆಚ್ಚು ಮತದಾರರು ತಮ್ಮ ಮತವನ್ನು ಬಳಸಲಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 89 ಸ್ಥಾನಗಳ ಪೈಕಿ ಬಿಜೆಪಿ ಗರಿಷ್ಠ 58, ಕಾಂಗ್ರೆಸ್ 26 ಮತ್ತು ಬಿಟಿಪಿ 2, ಎನ್ಸಿಪಿ ಒಂದು ಸ್ಥಾನಗಳಿಗೆ ಸ್ಪರ್ದಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಸೂರತ್ನಲ್ಲಿ ಮತ ಚಲಾಯಿಸಿದರು. ಇದಾದ ಬಳಿಕ ಗಾಂಧಿನಗರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು.
ಗುಜರಾತಿನ ಮಿನಿ ಆಫ್ರಿಕಾ ಎಂದೇ ಖ್ಯಾತಿ ಪಡೆದಿರುವ ಜಂಬೂರ್ ಗ್ರಾಮದಲ್ಲಿ ಮೊದಲ ಬಾರಿಗೆ ಜನರು ಮತ ಚಲಾಯಿಸುತ್ತಿದ್ದಾರೆ. ಅವರಿಗಾಗಿಯೇ ಇಲ್ಲಿ ವಿಶೇಷ ಬುಡಕಟ್ಟು ಮತಗಟ್ಟೆಯನ್ನು ಮಾಡಲಾಗಿದೆ.
Gujarat Election : 48.48 percent polling till 3 pm….