Gujarat election : ಮೊದಲ ಹಂತದ ಮತದಾನ ಪ್ರಾರಂಭ – 788 ಅಭ್ಯರ್ಥಿಗಳು ಕಣಕ್ಕೆ…
ಗುಜರಾತ್ ನಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಡಿಸೆಂಬರ್ 1ರ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 5.30ಕ್ಕೆ ಮುಕ್ತಾಯವಾಗಲಿದೆ.
ರಾಜ್ಯದ 89 ಸ್ಥಾನಗಳಿಗೆ 19 ಜಿಲ್ಲೆಗಳ ಈ ಸ್ಥಾನಗಳಿಗೆ 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದಲ್ಲಿ ಎರಡು ಕೋಟಿಗೂ ಹೆಚ್ಚು ಮತದಾರರು ತಮ್ಮ ಮತವನ್ನ ಚಲಾಯಿಸಿದ್ದಾರೆ.
ಗುಜರಾತ್ನಲ್ಲಿ ಮೊದಲ ಹಂತದ ಮತದಾನ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಇಂದು ಜಾಮ್ನಗರ, ಮೊರ್ಬಿ, ಕಚ್, ರಾಜ್ಕೋಟ್, ಪೋರ್ಬಂದರ್ ಮತ್ತು ಜುನಾಗಢ್ ವಿಶೇಷ ಕ್ಷೇತ್ರಗಳಾಗಿವೆ.
ನವಸಾರಿ ಜಿಲ್ಲೆಯ ವಸಂದಾ ಎಂಬಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಘರ್ಷಣೆ ನಡೆದಿದ್ದು, ಈ ವೇಳೆ ವಸಂದ ಬಿಜೆಪಿ ಅಭ್ಯರ್ಥಿ ಪಿಯೂಷ್ ಪಟೇಲ್ ಗಾಯಗೊಂಡಿದ್ದಾರೆ. ವಸಂದಾ ಕಾಂಗ್ರೆಸ್ನ ಭದ್ರಕೋಟೆ ಯಾಗಿದ್ದು. ಕಾಂಗ್ರೆಸ್ ನಿಂದ ಅನಂತ್ ಪಟೇಲ್ ಕಣದಲ್ಲಿದ್ದಾರೆ.
ಜಾಮ್ನಗರ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜಾ ರಾಜ್ಕೋಟ್ನಲ್ಲಿ ಮತ ಚಲಾಯಿಸಿದರು. ಎಲ್ಲ ಮತದಾರರು ಮತ ಚಲಾಯಿಸುವಂತೆ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಗುರುವಾರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ಗುಜರಾತ್ನ ಮಿನಿ ಆಫ್ರಿಕಾ ಎಂದು ಕರೆಯಲ್ಪಡುವ ಜಂಬೂರ್ ಗ್ರಾಮದಲ್ಲಿ ಜನರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಅವರಿಗಾಗಿಯೇ ಇಲ್ಲಿ ವಿಶೇಷ ಬುಡಕಟ್ಟು ಮತಗಟ್ಟೆಯನ್ನ ತಯಾರು ಮಾಡಲಾಗಿದೆ.
Gujarat election: First phase of voting begins – 788 candidates contest…