Oscars 2023 : ಆಸ್ಕರ್ ರೇಸ್ ಗೆ ಅಧಿಕೃತ ಪ್ರವೇಶ ಪಡೆದ ಗುಜರಾತ್ರಿ ಚಿತ್ರ ಛೆಲೋ ಶೋ….
ಗುಜರಾತಿ ಚಿತ್ರ ಛೆಲೋ ಶೋ 2023 ರ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ ಪಡೆದಿದೆ ಎಂದು ಘೋಷಿಸಲಾಗಿದೆ.
ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ 95 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಪ್ರವೇಶವನ್ನ ಪ್ರಕಟಿಸಿದೆ. ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಛೆಲೋ ಶೋ ಆಯ್ಕೆಯಾಗಿದೆ. ಈ ಚಿತ್ರ ಭಾರತದಲ್ಲಿ ಅಕ್ಟೋಬರ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇಂಗ್ಲಿಷ್‌ನಲ್ಲಿ ಲಾಸ್ಟ್ ಫಿಲ್ಮ್ ಶೋ ಎಂದು ಹೆಸರಿಸಲಾದ ಚೆಲೋ ಶೋ ಸಿನಿಮಾ ರಾಬರ್ಟ್ ಡಿನಿರೋ ಅವರ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆರಂಭಿಕ ಚಲನಚಿತ್ರವಾಗಿ ಪ್ರಥಮ ಪ್ರದರ್ಶನ ಕಂಡಿತ್ತು ಮತ್ತು ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ.
ಆಸ್ಕರ್ ಪ್ರಶಸ್ತಿಗೆ ತಮ್ಮ ಚಿತ್ರವನ್ನು ಆಯ್ಕೆ ಮಾಡಿದ್ದಕ್ಕಾಗಿ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಮತ್ತು ತೀರ್ಪುಗಾರರ ಸದಸ್ಯರಿಗೆ ಚಿತ್ರದ ನಿರ್ದೇಶಕ ಪಾನ್ ನಳಿನ್ ಧನ್ಯವಾದ ತಿಳಿಸಿದ್ದಾರೆ.
ಛೆಲೋ ಶೋ ಎಂಬುದು ಇದು ಭಾರತದ ದೂರದ ಹಳ್ಳಿಯಲ್ಲಿ ವಾಸಿಸುವ 9 ವರ್ಷದ ಹುಡುಗ ಮತ್ತು ಸಿನಿಮಾದೊಂದಿಗಿನ ಅವನ ಪ್ರೇಮ ಸಂಬಂಧದ ಸುತ್ತ ಕಥೆ ಸುತ್ತುತ್ತದೆ. ಚಿಕ್ಕ ಹುಡುಗ ಬೇಸಿಗೆಯಲ್ಲಿ ಪ್ರೊಜೆಕ್ಷನ್ ಬೂತ್‌ನಿಂದ ಚಲನಚಿತ್ರಗಳನ್ನು ಹೇಗೆ ನೋಡುತ್ತಾನೆ ಎಂಬುದನ್ನು ಚಿತ್ರ ತೋರಿಸುತ್ತದೆ.