ಗುಜರಾತ್ ನ ಡೊಲೆರೋ ಸಿಟಿ ಮಾಡಲ್ ನಮ್ಮ ರಾಜ್ಯಕ್ಕೆ ಬೇಡ : ಹೆಚ್ ಡಿಕೆ
ಬೆಂಗಳೂರು : ಗುಜರಾತ್ ನ ಡೊಲೆರೋ ಸಿಟಿ ಮಾಡಲ್ ಕರ್ನಾಟಕಕ್ಕೆ ಬೇಡ.ರಾಜ್ಯದ ತೆರಿಗೆ ಹಣವನ್ನು ಬೇರೆ ರಾಜ್ಯದ ಮಾಡಲ್ ನೋಡುವುದಕ್ಕೆ ವ್ಯಯ ಮಾಡಬೇಡಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಚಿವ ಜಗದೀಶ್ ಶೆಟ್ಟರ್ ಗುಜರಾತ್ ಪ್ರವಾಸದ ಬಗ್ಗೆ ಬೆಂಗಳೂರಿನಲ್ಲಿ ಕಿಡಿಕಾರಿದ ಹೆಚ್ ಡಿ ಕುಮಾರಸ್ವಾಮಿ, ನರೇಂದ್ರ ಮೋದಿ ಸಿಎಂ ಆಗಿದ್ದಾಗ ಗುಜರಾತ್ ನಲ್ಲಿ 2014 ರ ಚುನಾವಣೆಗೋಸ್ಕರ ಡೊಲೆರೋ ಸಿಡಿ 3 ಡಿ ಪ್ರಾಜೆಕ್ಟ್ ಘೋಷಣೆ ಮಾಡಿದ್ದರು. ಇದು ದೆಶದಲ್ಲೇ ಕ್ರಾಂತಿ ಮಾಡಲು ಪ್ರಾಜೆಕ್ಟ್ ಎಂದು ಮೋದಿ ಹೇಳಿದ್ದರು. ಆದ್ರೆ ಇವತ್ತು ಆ ಪ್ರಾಜೆಕ್ಟ್ ಅನ್ನು ಗುಜರಾತಿನ ಜನರೇ ಮರೆತು ಹೋಗಿದ್ದಾರೆ. 2008 ರಲ್ಲಿ ಪ್ರಾರಂಭ ಆದ ಈ ಡೊಲೆರೋ ಸಿಟಿ ಪ್ರಾಜೆಕ್ಟ್ 2021 ಆದರೂ ಮುಗಿದಿಲ್ಲ. ಇದನ್ನು ನೋಡುವುದಕ್ಕೆ ಜಗದೀಶ್ ಶೆಟ್ಟರ್ ಹೊರಟಿದ್ದಾರೆ. ಈ ಡೊಲೆರೋ ಸಿಟಿ ಪ್ರಾಜೆಕ್ಟ್ ನೋಡಲು ಗುಜರಾತ್ ಗೆ ಹೋಗುವುದು ಬೇಡ. ಯೂಟ್ಯೂಬ್ ನಲ್ಲಿ ನೋಡಿದರೆ ಸಾಕು ಎಂದು ಟೀಕೆ ಮಾಡಿದರು.
ಇನ್ನು ಡೊಲೆರೋ ಸಿಟಿ ಮಾಡಲ್ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇಲ್ಲ ಎಂದ ಹೆಚ್ ಡಿಕೆ, ನಮ್ಮ ರಾಜ್ಯದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳು ದೇಶಕ್ಕೆ ಮಾಡಲ್ ಆಗಿರುವ ಉದಾಹರಣೆಗಳಿವೆ. ಡೊಲೆರೋ ಸಿಟಿ ನೋಡಲು ಹೋಗಿ ಕರ್ನಾಟಕ ಕಟ್ಟಬೇಕಾದ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿರುವುದು ಜನರ ಬದುಕು. ಜನರು ಬದಕಲು ಏನು ಮಾಡಬೇಕೋ ನೋಡಿ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಸೃಷ್ಟಿಗೆ ಏನ್ ಮಾಡಬೇಕು ಅಂತ ಇಲ್ಲಿ ಕೂತು ಚರ್ಚೆ ಮಾಡಬೇಕು. ಅದು ಬಿಟ್ಟು ಡೊಲೆರೋ ಸಿಟಿ ಕಟ್ಟೋ ಅವಶ್ಯತೆ ಇಲ್ಲ ಎಂದು ಗರಂ ಆದರು.