ಸ್ಯಾಂಡಲ್ ವುಡ್ ತಾರೆಯರು ತಮ್ಮದೆಯಾದ ರೀತಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಂಗೀತ ನಿರ್ದೇಶಕರು, ಸಿನಿಮಾ ನಿರ್ದೇಶಕರು ಕೊರೊನಾ ವಿರುದ್ಧದ ಜಾಗೃತಿ ಹಾಡನ್ನು ರಚಿಸಿ ಬಿಡುಗಡೆ ಮಾಡಿದ್ದರು. ಇದೀಗ ಸಂಗೀತ ನಿರ್ದೇಶಕ ಗುರುಕಿರಣ್ ಕೂಡ ಕೊರೊನಾ ಬಗ್ಗೆ ಜಾಗೃತಿ ಹಾಡನ್ನು ರಚಿಸಿದ್ದಾರೆ.
‘ದೂರ ದೂರ ಇದ್ರೆ ದೂರ ವೀ ವಿಲ್ ಫೈಟ್ ಯೂ, ಜತೆ ಸೇರಿದ್ರೆ ಇಲ್ಲ ವಿ ಕಾಂಟ್ ಡೂ, ಕೊರೊನಾ ಕೊರೊನಾ ವೀ ವಿಲ್ ಕಿಲ್ ಯೂ ‘ಎಂಬ ಹಾಡನ್ನು ಗುರುಕಿರಣ್ ರಚಿಸಿ ಸಂಗೀತ ಸಂಯೋಜಿಸಿ ಅವರೇ ಹಾಡಿದ್ದಾರೆ. ಸದ್ಯ ಈ ಯುಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಾಹಿತಿ ಜಯಂತ್ ಕಾಯ್ಕಿಣಿ ಹಾಡೊಂದನ್ನು ಬರೆದಿದ್ದರು. ಆ ಹಾಡನ್ನು ಎಸ್ ಬಿ. ಬಾಲ ಸುಬ್ರಮಣ್ಯಂ ಹಾಡಿದ್ದರು. ಇನ್ನು ನಾದಬ್ರಹ್ಮ ಹಂಸಲೇಖ ಕೂಡ ಕೊರೊನಾ ಜಾಗೃತಿಯ ಹಾಡು ರಚಿಸಿ ಅವರ ಮಗಳು ನಂದಿನಿ ಮತ್ತು ಪತ್ನಿ ಲತಾ ಹಂಸಲೇಖ ಅವರಿಂದ ಹಾಡಿಸಿದ್ದರು.








