ಕೋಲಾರ : ಕುಡಿದ ಮತ್ತಿನಲ್ಲಿ ವ್ಯಕ್ತಿವೊಬ್ಬ ಹಾವನ್ನು ಬಾಯಿಂದ ಕಚ್ಚಿ ಸಾಯಿಸಿದ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದಿದೆ.
ಮಷ್ಟೂರು ಗ್ರಾಮದ ಕುಮಾರ್ ಹಾವನ್ನು ಸಾಯಿಸಿದ ವ್ಯಕ್ತಿಯಾಗಿದ್ದಾನೆ. ನಶೆಯಲ್ಲಿದ್ದ ಕುಮಾರ್ ದಾರಿಯಲ್ಲಿ ಹೋಗುತ್ತಿದ್ದ ಹಾವನ್ನು ಹಿಡಿದು ಕತ್ತಿಗೆ ಸುತ್ತಿಕೊಂಡು ಗ್ರಾಮ ಪ್ರವೇಶಿಸಿದ್ದಾನೆ. ಗ್ರಾಮದ ಮಧ್ಯೆ ಬರುತ್ತಿದ್ದಂತೆ ಕುತ್ತಿಗೆ ಹಾವನ್ನು ಬಾಯಿಂದ ಕಚ್ಚಿ ಸಾಯಿಸಿದ್ದಾನೆ. ಕುಮಾರ್ ಹಾವನ್ನು ಕಚ್ಚಿ ಸಾಯಿಸುತ್ತಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆಹಿಡಿದುಕೊಂಡಿದ್ದಾರೆ.
ಇನ್ನು ಹಾವನ್ನು ಸಾಯಿಸಿದ ಬಳಿಕ ಕುಮಾರ್ ಆರೋಗ್ಯವಾಗಿದ್ದು, ಗ್ರಾಮದಲ್ಲಿ ಓಡಾಡಿಕೊಂಡಿದ್ದಾನೆ. ಹಾವನ್ನ ಸಾಯಿಸಿದ್ದಕ್ಕೆ ಗ್ರಾಮಸ್ಥರು ಸಹ ಕ್ಲಾಸ್ ತೆಗೆದುಕೊಂಡಿದ್ದಾರೆ.