ರಾರಾ ಅಖಾಡದಲ್ಲಿ ಡಿ ಬಾಸ್ ಪ್ರಚಾರ : ಇದೆಲ್ಲಾ ವರ್ಕೌಟ್ ಆಗಲ್ಲ ಎಂದ ದಳಪತಿ
ತುಮಕೂರು : ಸ್ಟಾರ್ ಕ್ಯಾಪೇನ್ ನಿಂದ ಚುನಾವಣೆಯಲ್ಲಿ ಗೆಲುವು ಪಡೆಯಲು ಆಗೋದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( H.D.Kumaraswamy ) ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೋಡ್ ಶೋ ನಡೆಸುತ್ತಿದ್ದಾರೆ. ಇವರಿಗೆ ನಟಿ ಅಮೂಲ್ಯ, ರಾಕ್ ಲೈನ್ ವೆಂಕಟೇಶ್, ಸೇರಿದಂತೆ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ.
ಈ ವಿಚಾರವಾಗಿ ಶಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( H.D.Kumaraswamy ), ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳಲ್ಲಿ ಸ್ಟಾರ್ ಕ್ಯಾಂಪೇನ್ ಮಾಡುವುದು ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಸ್ಟಾರ್ ಕ್ಯಾಂಪೇನ್ ಗಳ ಪ್ರಚಾರದಿಂದ ಚುನಾವಣೆ ಗೆಲ್ಲಲು ಆಗಲ್ಲ ಎಂದು ಅಭಿಪ್ರಾಯ ಪಟ್ಟರು.
ಇದೇ ವೇಳೆ ರಾರಾ ಮಿನಿ ಸಮರಕ್ಕೆ ಮಂಡ್ಯ ಲೋಕ ಕದನವನ್ನು ಹೋಲಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಮಂಡ್ಯ ಚುನಾವಣೆ ಬೇರೆ, ಈ ಉಪ ಚುನಾವಣೆಯೇ ಬೇರೆ. ಕೆಲವರು ಮಂಡ್ಯ ಲೋಕಸಭಾ ಚುನಾವಣೆಯನ್ನು ಆರ್.ಆರ್ ನಗರಕ್ಕೆ ಹೋಲಿಕೆ ಮಾಡುತ್ತಿದ್ದಾರೆ.
ಮಂಡ್ಯದಲ್ಲಿ ಲೋಕಸಭೆ ಅಭ್ಯರ್ಥಿ ಪರ ಕಾಂಗ್ರೆಸ್ ಬಿಜೆಪಿ, ರೈತ ಸಂಘ ಒಟ್ಟಾಗಿ ಕೆಲಸ ಮಾಡಿದ್ದರು. ಅಲ್ಲದೇ ಮಂಡ್ಯ ಪಕ್ಷೇತರ ಅಭ್ಯರ್ಥಿ ಪರ ಮಾಧ್ಯಮಗಳು ಕೂಡ ಅನುಕಂಪ ತೋರಿದ ಹಿನ್ನೆಲೆಯಲ್ಲಿ ಗೆಲುವು ಪಡೆದರು.
ಸ್ಟಾರ್ ಕ್ಯಾಂಪೇನ್ ನಿಂದ ಯಾರು ಗೆದ್ದಿಲ್ಲ. ಸ್ಟಾರ್ ಗಳು ಜನರ ಬಳಿ ಮತ ಕೇಳುತ್ತಾರೆ, ಆ ಬಳಿಕ ಹೋಗುತ್ತಾರೆ. ಆ ಬಳಿಕ ಜನರ ಕಷ್ಟ ಸುಖ ಕೇಳಲು ಬರಲ್ಲ ಎಂದು ಹೇಳಿದರು.
ಇದನ್ನೂ ಓದಿ : ರಾರಾ..ಶಿರಾ ಅಖಾಡದಲ್ಲಿ ಬಂಡೆ, ಚೂರಿ..ಚೂರಿ ರಾಮಯ್ಯ ಸದ್ದು; ಹುಲಿಯಾ ಏಟು, ರಾಮ್ಲು ಎದ್ರೇಟು..!
ಶಿರಾಗೆ ನೀರು ಕೊಡುವ ಸಿಎಂ ಭರವಸೆ ಮಾತನಾಡಿದ ಕುಮಾರಣ್ಣ, ಬಿಜೆಪಿ ಸರ್ಕಾರ ಆಗ ನೀರು ಕೊಡದವರು ಈಗ ಕೊಡುತ್ತಾರಾ? ಬೇರೆ ಬೇರೆ ಜಿಲ್ಲೆಗಳಿಂದ ಕೇಸರಿ ಟವೆಲ್ ಹಾಕಿಕೊಡವರನ್ನು ಶಿರಾಗೆ ಕರೆತಂದಿದ್ದಾರೆ.
ನೀರು ಕೊಟ್ಟು ಜನರ ವಿಶ್ವಾಸಗಳಿಸೋದಾದರೆ ಸಂಜೆ 7 ಗಂಟೆ ಬಳಿಕ ಬಿಜೆಪಿ ಯುವಕರಿಂದ ಗಲ್ಲಿ ಗಲ್ಲಿ ಸುತ್ತಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಅಶೋಕ್ ಅವರಿಗೂ ಶಿರಾ ಕ್ಷೇತ್ರಕ್ಕೂ ಸಬಂಧವೇನು?
ಸಮ್ಮಿಶ್ರ ಸರ್ಕಾರ ಪತನ ಮುಗಿದ ಅಧ್ಯಾಯ. ಅದರ ಬಗ್ಗೆ ಮಾತನಾಡೋದು ಬೇಡ. ಜನತೆಯ ಪರಿಸ್ಥಿತಿ ಎಲ್ಲಿಗೆ ತಂದಿದ್ದಾರೆ ಎಂದು ಜನರೆ ಹೇಳುತ್ತಾರೆ.
ಮೈತ್ರಿ ಸರ್ಕಾರ ಬೀಳಲು ಯಾರು ಕಾರಣ ಅಂತ ಚರ್ಚಿಸುವ ಸಮಯವಲ್ಲ ಎಂದ ಹೆಚ್ ಡಿಕೆ, ಅಶೋಕ್ ಅವರಿಗೂ ಶಿರಾ ಕ್ಷೇತ್ರಕ್ಕೂ ಸಬಂಧವೇನು ಎಂದು ಪ್ರಶ್ನಿಸಿದರು.
ಶಿರಾದಲ್ಲಿ ಎಷ್ಟು ಹಳ್ಳಿ ಇದೆ, ಅವರ ಕಷ್ಟ ಏನು, ಪರಿಸ್ಥಿತಿ ಹೇಗಿದೆ ಅಂತಾ ಅಶೋಕ್ ಅವರಿಗೆ ತಿಳಿದಿದೆಯಾ? ಎಲ್ಲೋ ಬೆಂಗಳೂರಲ್ಲಿ ಕುಳಿತು ಶಿರಾ ದಲ್ಲಿ ಜನರು ಜೆಡಿಎಸ್ ಗೆಲ್ಲಲ್ಲ ಅಂತಾರೆ. ಆದರೆ ಆಸೆ ಆಮಿಷಗಳಿಗೆ ಶಿರಾ ಜನರು ಬಲಿಯಾಗಿಲ್ಲ.
ಇದನ್ನೂ ಓದಿ : ಅಕ್ರಮ ಮಾಡುವುದರಲ್ಲಿ ಡಿಕೆ ಬ್ರದರ್ಸ್ ನಿಸ್ಸೀಮರು : ಶೋಭಾ ಕರಂದ್ಲಾಜೆ
ಸಮ್ಮಿಶ್ರ ಸರ್ಕಾರ ತೆಗೆದು ಸರ್ಕಾರ ರಚನೆ ಮಾಡಿರುವವರಿಗೆ ಈಗಲಾದರೂ ಕೆಲಸ ಮಾಡಿ ಎಂದು ಜನರು ಬುದ್ಧಿ ಕಲಿಸುತ್ತಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel