ಅಕ್ರಮ ಮಾಡುವುದರಲ್ಲಿ ಡಿಕೆ ಬ್ರದರ್ಸ್ ನಿಸ್ಸೀಮರು : ಶೋಭಾ ಕರಂದ್ಲಾಜೆ ( Shobha Karandlaje )
ಬೆಂಗಳೂರು : ಅಕ್ರಮ ಮಾಡುವುದರಲ್ಲಿ ಡಿಕೆ ಬ್ರದರ್ಸ್ ನಿಸ್ಸೀಮರು. ಹೀಗಾಗಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಡಿ ಕೆ ಸಹೋದರರನ್ನು ಹೊರ ಹಾಕಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ( Shobha Karandlaje ) ಚುನಾವಣೆ ಆಯೋಗಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಆದ್ರೆ ಕಾಂಗ್ರೆಸ್ ನವರು ಗೆಲ್ಲಬೇಕು ಎಂದು ವಾತಾವರಣ ಕೆಡಿಸುತ್ತಿದ್ದಾರೆ.
ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಮೊದಲ ಚುನಾವಣೆ ನಡೆಯುತ್ತಿದ್ದು, ಅವರ ಆಸ್ತಿತ್ವ ಉಳಿಸಿಕೊಳ್ಳಲು ಅಕ್ರಮಗಳ ಮೇಲೆ ಅಕ್ರಮ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಈ ಬಗ್ಗೆ ಅಕ್ಟೋಬರ್ 19 ರಂದು ಮುನಿರತ್ನ ಚುನಾವಣಾ ಅಯೋಗಕ್ಕೆ ದೂರು ಸಲ್ಲಿಸಿದ್ದು, ಅದರಲ್ಲಿ ಎಲ್ಲವೂ ಸ್ಪಷ್ಟವಾಗಿದೆ.
ಕಾಂಗ್ರೆಸ್ ವೋಟರ್ ಐಡಿ ಕಾರ್ಡ್‍ಗಳನ್ನು ಸಂಗ್ರಹಿಸಿ ನಮ್ಮ ಅಭ್ಯರ್ಥಿ ಮೇಲೆ ಹೊರೆಸಿದ್ದಾರೆ ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ, ಎಂಎಲ್‍ಸಿ ನಾರಾಯಣಸ್ವಾಮಿ ಅವರು ವೋಟರ್ ಐಡಿ ಕಾರ್ಡ್‍ಗಳನ್ನು ಸಂಗ್ರಹಿಸಿರುವ ಮಾಹಿತಿ ನೀಡಿದ್ದಾರೆ.
ನಾರಾಯಣಸ್ವಾಮಿ ಹಾಗೂ ಇತರರು ಒಂದು ಸಾವಿರಕ್ಕೂ ಹೆಚ್ಚು ಐಡಿ ಕಾರ್ಡ್‍ಗಳನ್ನು ಸಂಗ್ರಹಿಸಿ ಚಿತ್ರೀಕರಣ ಮಾಡಿ ಅಯೋಗಕ್ಕೆ ನೀಡಿದ್ದಾರೆ. ಅದು ಸರಿಯಲ್ಲ ಎಂಬುದು ಈಗಾಗಲೇ ಅಯೋಗಕ್ಕೂ ಗೊತ್ತಿದೆ.
ಇದನ್ನೂ ಓದಿ : ಚುನಾವಣೆ ಬಳಿಕ ಬದಲಾವಣೆ ನಿಶ್ಚಿತ : ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಮಾತು
ರಾಜರಾಜೇಶ್ವರಿನಗರ, ನಂದಿನಿ ಲೇಔಟ್ ಹಾಗೂ ಯಶವಂತಪುರ ಪೊಲೀಸ್ ಠಾಣೆಗಳು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ಈಗಾಗಲೇ ಪೊಲೀಸರ ಮೇಲೂ ದಬ್ಬಾಳಿಕೆ, ಆವಾಜ್ ಹಾಕಲಾಗುತ್ತಿದೆ. ವರ್ಗಾವಣೆ ಮಾಡಿಸುವುದು, ಆವಾಜ್ ಹಾಕುವುದು ಮಾಡುತ್ತಲೇ ಬರುತ್ತಿದ್ದಾರೆ ಎಂದು ಕಿಡಿಕಾರಿದರು.
ಅಕ್ರಮ ಮಾಡುವುದರಲ್ಲಿ ನಿಸ್ಸೀಮರು
ಮುಂದುವರಿದು ಡಿಕೆಬ್ರದರ್ಸ್ ವಿರುದ್ಧ ಬೆಂಕಿಕಾರಿದ ಸಂಸದೆ, ಅಕ್ರಮ ಮಾಡುತ್ತಿರುವುದು ಡಿ.ಕೆ. ಬ್ರದರ್ಸ್, ನಮ್ಮ ಅಭ್ಯರ್ಥಿಯಲ್ಲ. ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ಮಾಡುವುದು, ಒತ್ತಡ ಹಾಕುವುದನ್ನು ಮಾಡಬಾರದು.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಕ್ಷೇತ್ರಕ್ಕೆ ಕಾಲಿಡಬಾರದು ಎಂಬುದು ನಮ್ಮ ಆಗ್ರಹವಾಗಿದೆ. ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅಕ್ರಮ ಮಾಡುವುದರಲ್ಲಿ ನಿಸ್ಸೀಮರು. ಹೀಗಾಗಿ ಅವರು ಕ್ಷೇತ್ರಕ್ಕೆ ಬರಬಾರದು ಎಂದು ಒತ್ತಾಯಿಸಿದರು.
ಇನ್ನು ಡಿಕೆ ಬ್ರದರ್ಸ್ ಅಕ್ರಮ ಮಾಡುತ್ತಿರುವ ವಿಡಿಯೋ ಮತ್ತು ಅಡಿಯೋ ನಮ್ಮ ಬಳಿ ಇದ್ದು, ಅದನ್ನು ಅಯೋಗಕ್ಕೆ ಕೊಟ್ಟಿದ್ದೇವೆ.
ಇದನ್ನೂ ಓದಿ : ಬಿಜೆಪಿ ಸರ್ಕಾರ ಸಾಲಮನ್ನಾ ಹಣ ಬಿಡುಗಡೆ ಮಾಡಿಲ್ಲ : ಹೆಚ್ ಡಿಕೆ
ಡಿಕೆ ಬ್ರದರ್ಸ್ ಅಕ್ರಮ ಮಾಡುತ್ತಾರೆ ಎಂದು ಖುದ್ದು ಅವರ ಪಕ್ಷದ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕುಟುಕಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel