“ನೈಟ್ ಕರ್ಫ್ಯೂ ವರ್ಕ್ ಆಗಲ್ಲ, ಲಾಕ್ ಡೌನ್ ಮಾಡಿ”
ಬೆಂಗಳೂರು : ಕೊರೊನಾ ಹೆಚ್ಚಿರುವ ಪ್ರದೇಶದಲ್ಲಿ ನೈಟ್ ಕರ್ಫ್ಯೂ ವರ್ಕ್ ಆಗುವುದಿಲ್ಲ, ಕನಿಷ್ಠ 15 ದಿನಗಳ ಕಾಲ ಲಾಕ್ ಡೌನ್ ಮಾಡಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸರ್ವ ಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ಹೆಚ್ಚು ಕೋವಿಡ್ ಇರುವ ಕಡೆ ಲಾಕ್ ಡೌನ್ ಮಾಡುವಂತೆ ಮನವಿ ಮಾಡಿಕೊಂಡರು. ಹೆಚ್ಚು ಕೋವಿಡ್ ಕೇಸ್ ಗಳು ಪತ್ತೆಯಾಗುತ್ತಿರುವ ಜಾಗಗಳಲ್ಲಿ ತಕ್ಷಣ ಲಾಕ್ ಡೌನ್ ಮಾಡಬೇಕು.
ನೈಟ್ ಕರ್ಫ್ಯೂ ಮಾಡೋದ್ರಿಂದ ಪ್ರಯೋಜ ಇಲ್ಲ. ಕನಿಷ್ಠ 15 ದಿನಗಳ ಕಾಲ ಲಾಕ್ ಡೌನ್ ಮಾಡಬೇಕು. ಆದ್ರೆ ಲಾಕ್ ಡೌನ್ ಮಾಡಿದ್ರೆ ಬಡವರಿಗೆ ಒಂದು ತಿಂಗಳು ಆರ್ಥಿಕ ಸಹಾಯ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇತ್ತ ಡಿಕೆ ಶಿವಕುಮಾರ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದು, ಸರ್ಕಾರಕ್ಕೆ ನಾವು ಸಹಕಾರ ಕೊಡಲು ಸಿದ್ಧ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳ ಕಡೆ ಕಡಿಮೆ ಗಮನ ಕೊಡಿ. ಜನರ ಆರೋಗ್ಯಕ್ಕೆ ಹೆಚ್ಚು ಅನುದಾನ ಕೊಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.