ಸರಕಾರದ್ದು ಒಂದು ದಿಕ್ಕು, ಅಧಿಕಾರಿಗಳದ್ದು ಇನ್ನೊಂದು ದಿಕ್ಕು
ಬೆಂಗಳೂರು : ಆರೋಗ್ಯ ಸಚಿವ ಶ್ರೀ ಡಾ.ಸುಧಾಕರ್ ಅವರು ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆಹಾರ & ನಾಗರಿಕ ಪೂರೈಕೆ ಇಲಾಖೆ ಬಿಪಿಎಲ್ ಅರ್ಜಿದಾರರನ್ನು ಸತಾಯಿಸುತ್ತಿದೆ. ಸರಕಾರದ್ದು ಒಂದು ದಿಕ್ಕು, ಅಧಿಕಾರಿಗಳದ್ದು ಇನ್ನೊಂದು ದಿಕ್ಕು ಎನ್ನುವಂತಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯೋಕೆ ಜನ ಬಿಪಿಎಲ್ ಕಾರ್ಡ್ ಗಾಗಿ ಪರದಾಡುತ್ತಿರುವ ಬಗ್ಗೆ ಟ್ವಿಟ್ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ಕೋವಿಡ್ ನಂತರ ಬದುಕು ದುಬಾರಿ ಅಷ್ಟೇ ಅಲ್ಲ, ಬರ್ಬರವೂ ಆಗಿದೆ ಎನ್ನುವುದು ಗೊತ್ತಿದ್ದರೂ ರಾಜ್ಯ ಸರಕಾರ ಬಡವರನ್ನು ವ್ಯವಸ್ಥಿತವಾಗಿ ಸೌಲಭ್ಯಗಳಿಂದ ಹೊರಗಿಡುತ್ತಿರುವ ಒಳಮರ್ಮವೇನು? ಆರೋಗ್ಯ ಕೆಟ್ಟರೆ ಬಡವರು ಬದುಕಲೇಬಾರದಾ? ಅವರು ಹಸಿವಿನಿಂದಲೇ ಸಾಯಬೇಕಾ ಎಂದು ಪ್ರಶ್ನಿಸಿದ್ದಾರೆ.
4,48,226 ಬಡಜನರು ಆಯುಷ್ಮಾನ್ ಭಾರತ್ ಕಾರ್ಡ್ʼಗಳನ್ನು ಪಡೆಯುವುದಕ್ಕೆ ಬಿಪಿಎಲ್ ಕಾರ್ಡ್ʼಗೆ ಅರ್ಜಿ ಹಾಕಿ ಕಚೇರಿಗಳ ಸುತ್ತ ಅಲೆಯುತ್ತಿದ್ದಾರೆ. ಇಂಥ ದುರಿತ ಕಾಲದಲ್ಲೂ 5 ತಿಂಗಳಾದರೂ ಆ ಅರ್ಜಿಗಳಿಗೆ ಮೋಕ್ಷವಿಲ್ಲ ಎಂದರೆ ಹೇಗೆ? 3/5#ಆಯುಷ್ಮಾನ್_ಭಾರತ್_ಕಾರ್ಡ್
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 29, 2022
4,48,226 ಬಡಜನರು ಆಯುಷ್ಮಾನ್ ಭಾರತ್ ಕಾರ್ಡ್ʼಗಳನ್ನು ಪಡೆಯುವುದಕ್ಕೆ ಬಿಪಿಎಲ್ ಕಾರ್ಡ್ʼಗೆ ಅರ್ಜಿ ಹಾಕಿ ಕಚೇರಿಗಳ ಸುತ್ತ ಅಲೆಯುತ್ತಿದ್ದಾರೆ. ಇಂಥ ದುರಿತ ಕಾಲದಲ್ಲೂ 5 ತಿಂಗಳಾದರೂ ಆ ಅರ್ಜಿಗಳಿಗೆ ಮೋಕ್ಷವಿಲ್ಲ ಎಂದರೆ ಹೇಗೆ?
ಆರೋಗ್ಯ ಸಚಿವ ಶ್ರೀ ಡಾ.ಸುಧಾಕರ್ ಅವರು ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆಹಾರ & ನಾಗರಿಕ ಪೂರೈಕೆ ಇಲಾಖೆ ಬಿಪಿಎಲ್ ಅರ್ಜಿದಾರರನ್ನು ಸತಾಯಿಸುತ್ತಿದೆ. ಸರಕಾರದ್ದು ಒಂದು ದಿಕ್ಕು, ಅಧಿಕಾರಿಗಳದ್ದು ಇನ್ನೊಂದು ದಿಕ್ಕು ಎನ್ನುವಂತಾಗಿದೆ.
ಹಳಿತಪ್ಪಿದ ಆಡಳಿತಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಅತ್ಯಗತ್ಯ ಹಾಗೂ ಅತಿಸೂಕ್ಷ್ಮವಾದ ಆರೋಗ್ಯ & ಆಹಾರ ಇಲಾಖೆಗಳ ವೈಫಲ್ಯದಿಂದ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಮುಖ್ಯಮಂತ್ರಿ ಶ್ರೀ @BSBommai @CMofKarnataka ಅವರು ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಬೇಕಿದೆ. 5/5#ಆಯುಷ್ಮಾನ್_ಭಾರತ್_ಕಾರ್ಡ್
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 29, 2022
ಹಳಿತಪ್ಪಿದ ಆಡಳಿತಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಅತ್ಯಗತ್ಯ ಹಾಗೂ ಅತಿಸೂಕ್ಷ್ಮವಾದ ಆರೋಗ್ಯ & ಆಹಾರ ಇಲಾಖೆಗಳ ವೈಫಲ್ಯದಿಂದ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಬೇಕಿದೆ ಎಂದು ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
h d kumaraswamy outrage on bjp government









