H D Kumaraswamy | ಜನರ ಭಾವನೆ ಜೆಡಿಎಸ್ ಪರವಿದೆ
ಬೆಂಗಳೂರು : ಸಮೀಕ್ಷೆಗಳು ಏನೇ ಹೇಳಿದ್ರೂ ಈ ಬಾರಿ ಜನರು ನಮ್ಮ ಜೆಡಿಎಸ್ ಪಕ್ಷಕ್ಕೆ ಅವಕಾಶ ನೀಡುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ – ಬಿಜೆಪಿ ಭರಾಟೆ ಏನೇ ಇದ್ದರೂ ಜನರ ಭಾವನೆ ಜೆಡಿಎಸ್ ಪರವಾಗಿದೆ.
ಈ ಬಾರಿ ಹೆಚ್ ಡಿ ಕುಮಾರಸ್ವಾಮಿಗೆ ಅವಕಾಶ ಕೊಡಬೇಕು ಅಂತಾ ಜನರ ಮನಸ್ಸಿನಲ್ಲಿದೆ. ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ, ಸಂಕಲ್ಪ ಯಾತ್ರೆ ಯಾವುದೇ ಯಶಸ್ವಿಯಾಗುವುದಿಲ್ಲ ಅಂತಾ ಹೇಳಿದರು.

ಇನ್ನು ಚುನಾವಣಾ ಪೂರ್ವ ಸರ್ವೆ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ ಡಿ ಕೆ, ನನಗೆ ಯಾರೋ ಮಾಡಿರುವ ಸರ್ವೆ ರಿಪೋರ್ಟ್ ಮುಖ್ಯವಲ್ಲ.
ನನ್ನ ಗುರಿ ಮುಂದಿನ ಚುನಾವಣೆಯಲ್ಲಿ 123 ಸ್ಥಾನ. ಅದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಕೂಡ ಸರ್ವೆ ಮಾಡಿಸುತ್ತಿದ್ದೇವೆ.
ಸದ್ಯ 30 ರಿಂದ 40 ಕ್ಷೇತ್ರಗಳಲ್ಲಿ ಸರ್ವೆ ಮಾಡಿದ್ದೇವೆ ಅಂತಾ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ : https://saakshatv.com/k-s-eshwarappa-s…-cm-siddaramaiah