H D Kumaraswamy | ನಾನು ಹಿಜಾಬ್ ಪಜಾಬ್ ಜೊತೆ ಇಲ್ಲ
ಮಂಡ್ಯ : ನಾನು ಹಿಜಾಬ್ ಪಜಾಬ್ ಜೊತೆ ಇಲ್ಲ. ನಮಗೆ ನಾಡಿನ ಜನರ ಬದುಕು ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಯಾವ ಜಾತಿಯ ಜನರಿರಲಿ ಜನರ ಬದುಕು ಮುಖ್ಯ.
ನಾಡಿನಲ್ಲಿ ಶಾಂತಿ ವಾತಾವರಣ ಹಾಳು ಮಾಡಬಾರದು. ನಾನು ಹಿಜಾಬ್ ಪಜಾಬ್ ಜೊತೆ ಇಲ್ಲ. ನಮಗೆ ನಾಡಿನ ಜನರ ಬದುಕು ಮುಖ್ಯ ಎಂದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ಅಹೋರಾತ್ರಿ ಹೋರಾಟದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಒಂದು ದಿನ ಕಲಾಪ ನಡೆಸೋಕೆ ದಿನಕ್ಕೆ ಒಂದೂವರೆಯಿಂದ ಎರಡು ಕೋಟಿ ಖರ್ಚಾಗುತ್ತೆ.
ಆದ್ರೆ ಅನಗತ್ಯವಾಗಿ ಕಲಾಪವನ್ನ ಹಾಳು ಮಾಡುತ್ತಿದ್ದಾರೆ. ಒಬ್ಬ ಮಂತ್ರಿ ಸ್ಥಾನದ ವಿಚಾರ ಇಟ್ಟುಕೊಂಡು ಕಲಾಪ ಹಾಳು ಮಾಡುತ್ತಿದ್ದಾರೆ.
ಯಾವ ವಿಷಯಕ್ಕೆ ಪ್ರಾತಿನಿಧ್ಯ ಕೊಡಬೇಕು ಅದನ್ನ ಕೊಡುತ್ತಿಲ್ಲ. ಇದು ಅವರ ವೈಯುಕ್ತಿಕ ಪ್ರತಿಷ್ಠೆಗೆ ಕಲಾಪ ಹಾಳಾಗುತ್ತಿದೆ.
ನಾಡಿನ ಜನರ ಬದುಕು ಕಟ್ಟಿಕೊಡಬೇಕಿದೆ. ಅದನ್ನ ಬಿಟ್ಟು ಇವರ ವೈಯುಕ್ತಿಕ ಪ್ರತಿಷ್ಠೆಗೆ ಕಲಾಪ ಹಾಳುಮಾಡುತ್ತಿದ್ದಾರೆ.
ಇಂತವರ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.







