ಬಿಜೆಪಿಯವ್ರು ಹೆಸರು ಚೆನ್ನಾಗಿಡ್ತಾರೆ : `ಜನ ಸೇವಕ್ ಕಾರ್ಯಕ್ರಮ’ದ ಬಗ್ಗೆ ಹೆಚ್ ಡಿಕೆ ವ್ಯಂಗ್ಯ
ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ ತಿಂಗಳಿನಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಹಿನ್ನೆಲೆ ರಾಜ್ಯ ಬಿಜೆಪಿ ಜನ ಸೇವಕ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಕಾಂಗ್ರೆಸ್ ಬಿಜೆಪಿಯವರು ನಾವು ಜಾಸ್ತಿ ಸ್ಥಾನಗಳನ್ನ ಪಡೆದಿದ್ದೇವೆ ಅಂತ ಕಿತ್ತಾಡ್ತಿದ್ದಾರೆ.
2023ಕ್ಕೆ ಏಕಾಂಗಿಯಾಗಿ ಸ್ಪರ್ಧಿಸಿ ಅಧಿಕಾರಕ್ಕೆ ಬರ್ತೀವಿ : ಕುಮಾರಸ್ವಾಮಿ
ಎಲ್ಲಿ ಎಲ್ಲಿ ಯಾರ್ ಯಾರ್ ಗೆದ್ದಿದ್ದಾರೆ ಅಂತ ನಾನು ಹೇಳಬಲ್ಲೆ. ಇದು ಪಕ್ಷದ ಚಿಹ್ನೆ ಮೇಲೆ ನಡೆಯೋ ಚುನಾವಣೆಯಲ್ಲ. ನಿಜವಾದ ಚುನಾವಣೆ ಜಿಲ್ಲಾ ಪಂಚಾಯಿತಿ ಮತ್ತು ಪಂಚಾಯಿತಿಯಲ್ಲಿ ನಡೆಯುತ್ತೆ ಎಂದರು.
ಜನ ಸೇವಕ್ ಬಗ್ಗೆ ಮಾತನಾಡಿ, ಬಿಜೆಪಿಯವರು ಲೂಟಿ ಹೊಡೆದ ಹಣದಲ್ಲಿ ಗ್ರಾಮಪಂಚಾಯಿತಿ ಚುನಾವಣೆ ನಡೆಸಿದ್ದಾರೆ. ಈಗ ಗೃಹ ಮಂತ್ರಿಗಳು ಬರ್ತಿದ್ದಾರೆ ಅಂತ ಜನ ಸೇವಕ್ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ.
ಯಾವ ಜನರ ಸೇವೆ 14 ತಿಂಗಳ ಸರ್ಕಾರದಲ್ಲಿ ಇವರು ಮಾಡಿದ್ದರೆ. ಈ ಬಿಜೆಪಿಯವರು ಹೆಸರು ಚೆನ್ನಾಗಿ ಇಡ್ತಾರೆ. ಇಂತಹ ಹೆಸರು ಇಟ್ಟು ಇಟ್ಟು ಅವರು ಅಧಿಕಾರ ಮಾಡಿದ್ರು ಎಂದು ವ್ಯಂಗ್ಯವಾಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









