ದೇಶದ ನಾಯಕರ ಬಗ್ಗೆ ಲಘುವಾಗಿ ಮಾತನಾಡಬೇಡಿ : ಕುಮಾರಸ್ವಾಮಿ
ರಾಮನಗರ : ದೇಶಕ್ಕೆ ಕೊಡುಗೆ ಕೊಟ್ಟಿರುವವರ ಬಗ್ಗೆ ಲಘುವಾಗಿ ಮಾತನಾಡಬಾರದು. ವೈಯಕ್ತಿಕ ಜೀವನ ಬೇರೆ, ಆದ್ರೆ ದೇಶಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ನಾವು ಹೆಚ್ಚಿನ ಗಮನಕೊಡಬೇಕು ಎಂದು ಕಾಂಗ್ರೆಸ್-ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ಸಿಟಿ ರವಿ ಹೇಳಿದನ್ನು ಗಮನಿಸಿದ್ದೇನೆ, ಕಾಂಗ್ರೆಸ್ ನವರು ಹೇಳಿದನ್ನು ಗಮನಿಸಿದ್ದೇನೆ. ದೇಶಕ್ಕೆ ಕೊಡುಗೆ ಕೊಟ್ಟಿರುವವರ ಬಗ್ಗೆ ಲಘುವಾಗಿ ಮಾತನಾಡಬಾರದು. ವೈಯಕ್ತಿಕ ಜೀವನ ಬೇರೆ, ಆದ್ರೆ ದೇಶಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ನಾವು ಹೆಚ್ಚಿನ ಗಮನಕೊಡಬೇಕು. ಅದು ನಮಗೆ ಮಾರ್ಗದರ್ಶನ ನೀಡುತ್ತದೆ. ನೆಹರೂ ಅವರು ದೇಶಕ್ಕಾಗಿ ಅವರದ್ದೇ ಆದ ಕೊಡುಗೆ ಕೊಟ್ಟಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚು ಜೈಲು ವಾಸ ಅನುಭವಿಸಿದವರು ನೆಹರು ಅವರು. ದೇಶದ ಯಾವುದೇ ನಾಯಕರ ಬಗ್ಗೆ ಲಘುವಾಗಿ ಮಾತನಾಡುವುದುರ ಮುಖಾಂತರ ದೇಶಕ್ಕೆ ಅಪಮಾನ ಮಾಡಬೇಡಿ ಎಂದು ಸಲಹೆ ನೀಡಿದರು.
ಇನ್ನು ಮೇಕೆದಾಟು ಯೋಜನೆ ವಿಚಾರವಾಗಿ ಮಾತನಾಡಿ, ರಾಜ್ಯ ಸರ್ಕಾರ ಹೇಳಿಕೆಗಳು ಘೋಷಣೆಯಾಗಿ ಉಳಿದಿವೆ. ಈಗಾಗಲೇ ಯೋಜನೆ ಆರಂಭ ಮಾಡಬೇಕಿತ್ತು. ರಾಜಕೀಯವಾಗಿ ಹಲವು ಸಮಸ್ಯೆಗಳನ್ನ ಈ ಸರ್ಕಾರ ಅನುಭವಿಸುತ್ತಿದೆ. ಈಗಾಗಲೇ ರಾಜ್ಯಪಾಲರನ್ನ ಕೂಡ ಭೇಟಿ ಮಾಡಿದ್ದೇವೆ. ರಾಷ್ಟ್ರಪತಿಗಳು, ಕೇಂದ್ರ ಸರ್ಕಾರ ಮನವೊಲಿಸಲು ಕ್ರಮವಹಿಸಬೇಕೆಂದು ಮನವಿ ಮಾಡಿದ್ದೇವೆ. ಸದ್ಯದರಲ್ಲೇ ಸಿಎಂ ಅವರನ್ನ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.









