H D Kumaraswamy | ಗುತ್ತಿಗೆದಾರರ ಭ್ರಷ್ಟಾಚಾರ ಆರೋಪ : ಯಾರು ನೆಟ್ಟಗಿದ್ದರು ಎಂದ ಹೆಚ್ಡಿಕೆ
ಮೈಸೂರು : ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು, ಈ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಯಾರು ನೆಟ್ಟಗಿದ್ದರು ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದವರಿಗೂ ಈ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ನ್ಯಾಯಾಂಗ ತನಿಖೆ ವಿಚಾರ ? ಯಾರಿಗಾದರೂ ಶಿಕ್ಷೆ ಆಗಿದೆಯಾ ? ಒಬ್ಬರು ಹೊಡೆದಂಗೆ ಮಾಡು ನಾನು ಅತ್ತಾಗೆ ಮಾಡುತ್ತೇನೆ ಅಂತಾರೆ. ಇದು ಬಿಜೆಪಿ ಕಾಂಗ್ರೆಸ್ ನವರು ಮಾಡುವುದು. ಮುನಿರತ್ನಂ ಮೊದಲು ಗುತ್ತಿಗದಾರರು, ಆಮೇಲೆ ರಾಜಕಾರಣಕ್ಕೆ ಬಂದಿದ್ದು. ಮುನಿರತ್ನಂ ಗುತ್ತಿಗೆ ಮಾಡಿದ ಕೆಲಸದಲ್ಲಿ ಮಗು ಸಾವ್ನಪ್ಪಿತ್ತು. ಆ ಪ್ರಕರಣದಲ್ಲಿ ಯಾರಿಗೆ ಶಿಕ್ಷೆ ಯಾಯ್ತು ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಮೈತ್ರಿ ಸರ್ಕಾರ ಬಿಟ್ಟು ಹೋದವರು ಮೂರು ಜನ ಬಿಡಿಎ ಸಭೆಗೆ ಬಂದರೇ ಇಷ್ಟು ಹಣ ನೀಡಬೇಕಿತ್ತು. ನಾನು ಬಂದ ಮೇಲೆ ಅದು ನಿಂತಿತ್ತು ಅಂತಾ ಅಧಿಕಾರಿ ಹೇಳಿದ್ದರು. ನನ್ನ ಕಾಲದಲ್ಲಿ 45 ಇಂಜಿನಿಯರ್ ಪ್ರಮೋಷನ್ ಮಾಡಿದ್ದೇನೆ. ಯಾವ ಅಧಿಕಾರಿಯಿಂದಲೂ ಒಂದ್ ಕಪ್ ಕಾಫಿ ಕುಡಿದಿಲ್ಲ. ನಾವು ಯಾವ ಅಧಿಕಾರಿಗೂ ಚಂದ ಎತ್ತಲೂ ಹೇಳಿಲ್ಲ. ಹೀಗಾಗಿ ಅಧಿಕಾರಿಗಳು ದಾಖಲೆಗಳನ್ನ ನಮಗೆ ಕೊಡುತ್ತಾರೆ. ಇತ್ತೀಚಿನ ದಿನಗಳಲ್ಲಿ ದಾಖಲೆ ಕಲೆಕ್ಟ್ ಮಾಡುವುದನ್ನ ನಿಲ್ಲಿಸಿದ್ದೇನೆ. ಬಿಜೆಪಿಯವರು ಮಾತೆದ್ರಿ ಸಾಕ್ಷಿಕೊಡಿ ಅಂತೀರೆ ನಿಮಗೆ ಆತ್ಮಸಾಕ್ಷಿ ಇಲ್ವಾ ಎಂದು ಕಿಡಿಕಾರಿದರು.
ಇನ್ನು ಲಾಟಿರಿ ನಿಷೇಧ ಮಾಡುವಾಗ ಸಾಕಷ್ಟು ಒತ್ತಡ ಇತ್ತು. ಒತ್ತಡ ತಂದವರು ಈಗಲೂ ಬದುಕಿದ್ದಾರೆ. ನಿಷೇಧ ಮಾಡದಂತೆ ನನಗೂ ಆಫರ್ ಬಂದಿತ್ತು. ದೆಹಲಿ ನಾಯಕರು ಬಂದಾಗ ಸೂಟ್ ಕೇಸ್ ಕೊಡಬೇಕಿತ್ತು. ಇದು ಎರೆಡು ಪಕ್ಷದಲ್ಲೂ ಇದೆ. ನಾನು ಸಿಎಂ ಆಗಿದ್ದಾಗ ನೇರವಾಗಿ ಗುತ್ತಿಗೆದಾರರ ಅಕೌಂಟ್ ಗೆ ನೇರವಾಗಿ ಹಣ ಹೋಗುತ್ತಿತ್ತು ಎಂದು ಕುಮಾರಸ್ವಾಮಿ ತಿಳಿಸಿದರು.








