ಅವರನ್ನು ಹೆಂಗೆ ಬಲಿ ಹಾಕಬೇಕು ನನಗೆ ಗೊತ್ತಿದೆ : ಹೆಚ್.ಡಿ. ರೇವಣ್ಣ

1 min read
H D Revanna vs preetham-gowda hassana Saaksha tv

ಅವರನ್ನು ಹೆಂಗೆ ಬಲಿ ಹಾಕಬೇಕು ನನಗೆ ಗೊತ್ತಿದೆ : ಹೆಚ್.ಡಿ. ರೇವಣ್ಣ

ಹಾಸನ : ಕುಮಾರಸ್ವಾಮಿ ಸರ್ಕಾರ ಇದ್ದಾಗ ಹಾಸನ ಜಿಲ್ಲೆಯಲ್ಲಿ 28 ಪ್ರಥಮ ದರ್ಜೆ ಕಾಲೇಜು ಮಾಡಿದ್ದೇವೆ. ಕೆಲವರಿಗೆ ಪ್ರಜ್ಞೆ ಇರಲ್ಲ, ಅವರಿಗೆ ದುಡ್ಡು ಹೊಡಿಬೇಕು ಅಷ್ಟೇ ಎಂದು ಹೆಸರೇಳದ ಶಾಸಕ ಪ್ರೀತಂಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ಎಲ್ಲೆಲ್ಲಿ ಯಾವ್ಯಾವ ಕಾಲೇಜು ತೆರೆದಿದ್ದೇವೆ ದಾಖಲೆ‌ ತೆಗೆದು ನೋಡಲಿ. ಹಾಸನ ನಗರದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಅಪ್ರೂವಲ್ ಆಗಿತ್ತು. ಯಡಿಯೂರಪ್ಪ ಅವರ ಘನ ಕಾರ್ಯ ಇದನ್ನು ಕ್ಯಾನ್ಸಲ್ ಮಾಡಿದ್ದರು.

ಕೆಲವು ನೀರಾವರಿ ಅಧಿಕಾರಿಗಳು ದುಡ್ಡು ಹೊಡೆಯುತ್ತಿದ್ದಾರೆ. ಅವರನ್ನು ಹೆಂಗೆ ಬಲಿಯಾಕಬೇಕು ನನಗೆ ಗೊತ್ತಿದೆ, ಎಲ್ಲಾ ದಾಖಲೆಗಳನ್ನು ತರಿಸುತ್ತಿದ್ದೇನೆ. ತನಿಖೆ ಹೇಗೆ ಮಾಡಿಸಬೇಕೆಂದು ನನಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

H D Revanna vs preetham-gowda hassana Saaksha tv

ಇನ್ನು ನೀರಾವರಿ ಇಲಾಖೆ, ಹುಡಾ, ಸಮಾಜ ಕಲ್ಯಾಣ ಇಲಾಖೆ, ಇತರೆ ಇಲಾಖೆಗಳಲ್ಲಿ ಹೇಗೆ ಲೂಟಿ ನಡೆಯುತ್ತಿದೆ. ವೆಂಕಟರಮಣಪ್ಪ ಅಂಥಾ ಒಬ್ಬ ಇದ್ದಾನೆ, ಅವನಿಗೆ ಮೂರು ಹುದ್ದೆ ಕೊಟ್ಟಿದ್ದಾರೆ.

ಅವನ ಕೆಲಸ ಬೋಗಸ್ ಬಿಲ್ ಮಾಡೋದು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಹಾಸನ ಜಿಲ್ಲೆಗೆ ಮಂಜೂರು ಆಗಿದ್ದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿಲ್ಲಿಸಿದರು ಎಂದು ಆರೋಪಿಸಿದರು.

ಚನ್ನಪಟ್ಟಣ ಕೆರೆ ದುಡ್ಡು ತೆಗೆದು 5 ಕೋಟಿ, 7 ಕೋಟಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ಬರಿ ದುಡ್ಡು ಹೊಡೆಯುವ ಕಾರ್ಯಕ್ರಮವಾಗಿದೆ. ಇಲ್ಲಿಯವರೆಗೆ ನಾನು ತಡೆದಿದ್ದೆ, ಕೆಲವರು ಬೆಳಿಗ್ಗೆ ಎದ್ದರೆ ದುಡ್ಡು ಹೊಡೆಯುವ ಕಾರ್ಯಕ್ರಮ ಮಾಡ್ತಿದ್ದಾರೆ. ನಾನು ಯಾರ ಹೆಸರನ್ನು ಹೇಳಲು ಹೋಗಲ್ಲ. ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತೆ ಎಂದು ರೇವಣ್ಣ ಕಿಡಿಕಾರಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd