ಚುನಾವಣಾ ಆಯೋಗ ಒಂದು ಪಕ್ಷದ ಏಜೆಂಟ್ ಆಗಿದೆ : ಹೆಚ್.ರೇವಣ್ಣ
ಹಾಸನ : ರಾಜ್ಯದಲ್ಲಿ ಚುನಾವಣಾ ಆಯೋಗ ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಹೆಚ್.ರೇವಣ್ಣ ಮಾತನಾಡುತ್ತ ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿ ಚುನಾವಣಾ ಆಯೋಗ ನಲುಗುತ್ತಿದೆ.
ಶಿರಾ ಕ್ಷೇತ್ರದ ಒಂದು ಊರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಊರೊಳಗಡೆ ಬಿಟ್ಟಿಲ್ಲ. ಆದರೂ ಆ ಊರಿನಲ್ಲಿ ಶೇ, 80ರಷ್ಟು ಮತಗಳು ಲೀಡ್ ಇದೆ ಅಂತಾ ಹೇಳುತ್ತಾರೆ. ಆಡಳಿತ ಯಂತ್ರವನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ದೂರಿದರು.
ಇದೇ ವೇಳೆ 25 ಸಾವಿರ ಮತಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಮಾತನಾಡಿ. ಚುನಾವಣೆಗೂ ಮೊದಲೇ 20 ಸಾವಿರ ಮತದಿಂದ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ.
ವಿದ್ಯುತ್ ಬೆಲೆ ಏರಿಕೆ : ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಕಾಂಗ್ರೆಸ್
ಚುನಾವಣಾ ಆಯೋಗ ರಾಜ್ಯದಲ್ಲಿ ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ.
ನಮ್ಮ ಅಧ್ಯಕ್ಷ ದಕ್ಷ.. ನಿಮ್ಮ ಅಧ್ಯಕ್ಷ ವಿದೂಷಕ : ಕೈ-ಬಿಜೆಪಿ ಮಧ್ಯೆ ಟ್ವಿಟ್ಟರ್ ವಾರ್
ಸಿಎಂ ಮತ್ತು ಸಿಎಂ ಮಗ ಇಬ್ಬರೂ ಎರಡು ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಅಂತಾ ಹೇಳುತ್ತಾರೆ. ಈ 25 ಸಾವಿರ ಮತ ಪಡೆಯೋಕೆ ಎಷ್ಟು ಹಣ ಖರ್ಚು ಮಾಡಿದ್ದಾರೆ ಅಂತಾ ಹೇಳಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಒಂದು ವೋಟಿಗೆ ಐದು ಸಾವಿರ, ಮೂರು ಸಾವಿರ ಎಂದು ಹಂಚಿದ ಮೇಲೆ ಚುನಾವಣೆ ಯಾಕೆ ಮಾಡಬೇಕು ಎಂದು ಪ್ರಶ್ನಿಸಿ ಬಿಜೆಪಿಯವರು ಗುಪ್ತಚರ ಇಲಾಖೆಯನ್ನು ಏನು ಚುನಾವಣೆ ಸಮೀಕ್ಷೆ ಮಾಡೋಕೆ ಬಿಟ್ಟಿದ್ದೀರಾ ಎಂದು ರೇವಣ್ಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel