ಬೆಂಗಳೂರು : ಇಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, ನಾಡಿನ ಜನರಿಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ ಡಿಡಿ, ಈ ವರ ಮಹಾಲಕ್ಷ್ಮಿ ವ್ರತವು ನಿಮಗೆ ಜೀವನದ ಎಲ್ಲ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಒದಗಿಸಲಿ, ಕಷ್ಟದ ಕಾರ್ಮೋಡಗಳು ಸರಿದು ಆಯುರಾರೋಗ್ಯ, ಸಂಪತ್ತು, ಸುಖ, ಶಾಂತಿ, ನೆಮ್ಮದಿ ನಿಮ್ಮದಾಗಲಿ ಎಂದು ಹಾರೈಸಿದ್ದಾರೆ.
May goddess Lakshmi shower you with happiness and prosperity. Have a blessed #Varamahalakshmi.
ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಮಹಾಲಕ್ಷ್ಮಿ ಸುಖ, ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
— H D Devegowda (@H_D_Devegowda) July 31, 2020
ಹೆಚ್ ಡಿಕೆ ಟ್ವೀಟ್ ನಲ್ಲಿ..
“ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ತಮ್ಮೆಲ್ಲರಿಗೂ ಲಕ್ಷ್ಮೀದೇವಿ ಸುಖ, ಸಮೃದ್ಧಿ ನೀಡಲಿ ಎಂದು ಕೇಳಿಕೊಳ್ಳುತ್ತೇನೆ. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ನಾವೆಲ್ಲರೂ ನಮ್ಮ ಮನೆಯೊಳಗಡೆಯೇ ಇದ್ದು ಮನೆಯವರೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸೋಣ” ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ತಮ್ಮೆಲ್ಲರಿಗೂ ಲಕ್ಷ್ಮೀದೇವಿ ಸುಖ, ಸಮೃದ್ಧಿ ನೀಡಲಿ ಎಂದು ಕೇಳಿಕೊಳ್ಳುತ್ತೇನೆ.
ಕೊರೊನಾ ಸಂಕಷ್ಟದ ಈ ಸಮಯದಲ್ಲಿ ನಾವೆಲ್ಲರೂ ನಮ್ಮ ಮನೆಯೊಳಗಡೆಯೇ ಇದ್ದು ಮನೆಯವರೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸೋಣ.— H D Kumaraswamy (@hd_kumaraswamy) July 31, 2020