H M Revanna | ಸಿದ್ದರಾಮೋತ್ಸವ ನಂತರ ಬಿಜೆಪಿಗೆ ಭಯಬಂದಿದೆ
ಕೊಪ್ಪಳ : ಸಿದ್ದರಾಮೋತ್ಸವ ನಂತರ ಬಿಜೆಪಿಗೆ ಭಯಬಂದಿದೆ ಎಂದು ಕಾಂಗ್ರೆಸ್ ಮುಖಂಡ ಹೆಚ್ ಎಂ ರೇವಣ್ಣ ಹೇಳಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ತಿಂಗಳಿಗೊಮ್ಮೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಈ ಬಗ್ಗೆ ಕೊಪ್ಪಳದಲ್ಲಿ ಮಾತನಾಡಿರುವ ಹೆಚ್.ಎಂ.ರೇವಣ್ಣ, ಸಿದ್ದರಾಮೋತ್ಸವ ನಂತರ ಬಿಜೆಪಿಗೆ ಭಯಬಂದಿದೆ. ಈ ರಾಷ್ಟ್ರದಲ್ಲಿ ಜನಪ್ರಿಯ ನಾಯಕನಾಗಿ ಕೊಟ್ಟ ಮಾತಿನಂತೆ ನಡೆದುಕೊಂಡಂತ ನಾಯಕ ಸಿದ್ದರಾಮಯ್ಯ. ಉತ್ತಮ ರಾಜಕಾರಣಿ ಮತ್ತು ಮುಖ್ಯಮಂತ್ರಿ ಕೆಲಸ ಮಾಡಿವರು. ಅವರ ಕೊಟ್ಟ ಯೋಜನೆಗಳು ಇಡೀ ಭಾರತದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎಂದರು.
ಇನ್ನು ಸಿದ್ದರಾಮಯ್ಯನವರ ಕ್ಷೇತ್ರ ಯಾವುದು ಎಂಬ ಪ್ರಶ್ನೆಗೆ ಹೆಚ್ ಎಂ ರೇವಣ್ಣ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರಿಗೆ ಆಪ್ತರು ಒಬ್ಬರಲ್ಲ ಇಡೀ ರಾಜ್ಯದಲ್ಲಿ ಆಪ್ತರಿದ್ದಾರೆ.

ಸಿದ್ದರಾಮಯ್ಯ ಅವರು ಈ ರಾಜ್ಯದ ದೊಡ್ಡ ನಾಯಕರು. ಈಗಾಗಲೇ ಎರಡು ಮೂರು ಜಿಲ್ಲೆಯ ನಾಯಕರು ಅವರನ್ನು ಕರೆದಿದ್ದಾರೆ. ಆದ್ರೆ ಸಿದ್ದರಾಮಯ್ಯನವರು ಬಾದಾಮಿಯಿಂದ ನಿಲ್ಲಬೇಕು, ಅಲ್ಲಿಂದಲೇ ಗೆಲ್ಲಬೇಕು ಅಂತಾ ಹೇಳಿದ್ದಾರೆ. ಆದ್ರೂ ಇನ್ನು ಬೇರೆ ಬೇರೆಯಡೆ ಕರೆಯುತ್ತಿದ್ದಾರೆ ಎಂದರು.
ಶಾಸಕ ಅರವಿಂದ ಲಿಂಬಾವಳಿ ನಡುವಳಿಕೆ ಬಗ್ಗೆ ಇದೇ ವೇಳೆ ಕಿಡಿಕಾರಿದ ರೇವಣ್ಣ, ಈ ರಾಜ್ಯದ ಇತಿಹಾಸವನ್ನು ತೆರೆದು ನೋಡಿ, ಬಿಜೆಪಿ ಶಾಸಕರ ವರ್ತನೆ ಏನಂತ ಹೇಳುತ್ತದೆ. ಅವರು ನಾಯಕರು ಹೇಳ್ತಾರೆ ಬೇಟಿ ಪಡಾವೋ ಬೇಟಿ ಬಚಾವೂ ಅಂತಾ, ಆದರೆ ಉತ್ತರ ಭಾರತದಿಂದ ಹಿಡಿದ ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಏನಾಗಿದೆ ? ಮಹಿಳೆಯರ ಹಾಗೂ ಯುವತಿಯರ ಮೇಲೆ ಅತ್ಯಾಚಾರಗಳು ಹೆಚ್ಚುತ್ತಿವೆ. ಇದೇ ಶಾಸಕರು, ಚುನಾಯಿತ ಸದಸ್ಯರು ಸಭೆಯಲ್ಲಿ ಅಶ್ಲೀಲ ಚಿತ್ರ ನೋಡುತ್ತಾರೆ. ಅಂತಹವರು ಇಂದು ಸಿಎಂ ಕಾರ್ಯದರ್ಶಿಯಾಗಿದ್ದಾರೆ. ಬಿಜೆಪಿಯಲ್ಲಿ ಇಂತಹವರ ಸಂಖ್ಯೆ ಹೆಚ್ಚಿದೆ ಎಂದಿದ್ದಾರೆ.








