ನಾನು ಉಪೇಂದ್ರ `ಎ’ ಸಿನಿಮಾಹಾಗೆ ಸಸ್ಪೆನ್ಸ್ ಉಳ್ಳವನು : ಹೆಚ್.ನಾಗೇಶ್
ಕೋಲಾರ : ಉಪೇಂದ್ರ ‘ಎ’ ಸಿನಿಮಾ ಹಾಗೆ ನಾನು ಸಾಕಷ್ಟು ಸಸ್ಪೆನ್ಸ್ ಕೊಡುವಂತಹ ಗುಣ ಇರುವವನು ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ.
ಹೆಚ್.ನಾಗೇಶ್ ಅವರು ಇದೇ ಮೊದಲ ಬಾರಿಗೆ ತಮ್ಮ ರಾಜಕೀಯ ಒಡನಾಡಿ ಕೊತ್ತೂರು ಮಂಜುನಾಥ್ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಕೋಲಾರ ಸಂಸದ ಮುನಿಸ್ವಾಮಿ ವಿರುದ್ಧವು ಕಿಡಿಕಾರಿದ್ದಾರೆ.
ಮುಳಬಾಗಿಲು ನಗರಸಭೆ ಅಧ್ಯಕ್ಷ್ಯ, ಉಪಾಧ್ಯಕ್ಷ ಚುನಾವಣೆ ವೇಳೆ ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್ ಸಚಿವ ನಾಗೇಶ್ ವಿರುದ್ಧ ಧಿಕ್ಕಾರಗಳನ್ನ ಕೂಗಿ ಪ್ರತಿಭಟನೆಗೆ ಮುಂದಾಗಿದ್ದರು..

ಇದರಿಂದಾಗಿ ಚುನಾವಣೆ ದಿನ ಸ್ಥಳದಲ್ಲಿ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಇಂದು ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಶ್, ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್ ಕೀಳಾಗಿ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.
ನಾನು ಉಪೇಂದ್ರ ‘ಎ’ ಸಿನಿಮಾ ಹಾಗೆ ಸಾಕಷ್ಟು ಸಸ್ಪೆನ್ಸ್ ಕೊಡುವಂತಹ ಗುಣ ಇರುವವನು. ನಾನು ಮಾಡೋದು ಕಡೆವರೆಗೂ ರಹಸ್ಯವಾಗಿಯೇ ಇರುತ್ತೆ.
ಮುಳಬಾಗಿಲು ನಗರಸಭೆ ಅಧ್ಯಕ್ಷ್ಯ ಉಪಾಧ್ಯಕ್ಷ್ಯರಾಗಿ ಆಯ್ಕೆಯಾಗಿರುವರು ನನ್ನ ಬೆಂಬಲಿಗರೇ, ನಾನೇ ಅವರ ಆಯ್ಕೆಗೆ ಬೆಂಬಲ ನೀಡಿದೆ. ಎಲ್ಲಾ ನಾಯಕರ ಒಮ್ಮತದಿಂದ ಇದೆಲ್ಲಾ ಸಾಧ್ಯವಾಯಿತು.
ಇದನ್ನೂ ಓದಿ : ಉಮಾಶ್ರೀ ಬಾಗಲಕೋಟೆ ಮನೆಗೆ ಕನ್ನ ಹಾಕಿದ ಖದೀಮರು..!
ಈ ಮೂಲಕ ಮುಳಬಾಗಿಲು ತಾಲೂಕಿನ ಕೆಲ ಮುಖಂಡರ ಬಣ್ಣ ಬಯಲಾಗಿದೆ. ಕೆಲವರು ಅಪಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು. ಅವರು ಯಾರು..? ಅವರ ಕಥೆ ಏನೆಂದು ಮುಳಬಾಗಿಲಿನಲ್ಲಿ ಈಗ ಗೊತ್ತಾಗಿದೆ.
ನಾನು ಏನೆಂದು ಎಲ್ಲರಿಗೂ ತೋರಿಸಿದ್ದೇನೆ, ನಾನು ಏನೂ ಹೇಳಿ ಮಾಡೋನಲ್ಲ, ಯಾಕೆಂದರೆ ನಾನು ಉಪೇಂದ್ರ ಎ ಸಿನಿಮಾಹಾಗೆ ಸಸ್ಪೆನ್ಸ್ ಉಳ್ಳವನು ಎಂದು ತಮ್ಮ ವಿರೋಧಿಗಳಿಗೆ ವಾರ್ನಿಂಗ್ ನೀಡಿದ್ದಾರೆ.
ಇದೇ ವೇಳೆ ತಮ್ಮ ರಾಜಕೀಯ ಒಡನಾಡಿ ಕೊತ್ತೂರು ಮಂಜುನಾಥ್ ವಿರುದ್ಧ ಕಿಡಿಕಾರಿದ ನಾಗೇಶ್, ನಾನು ಆಯ್ಕೆಯಾದ ಮೊದಲ 2 ವರ್ಷ ಕೊತ್ತೂರು ಮಂಜುನಾಥ್ ಹೇಳಿದಂತೆ ನಡೆದಿದ್ದೆ.
ನನ್ನನ್ನ ಓವರ್ ಟೇಕ್ ಮಾಡುವ ಸಾಕಷ್ಟು ಕೆಲಸ ಮಾಡಿದ್ದಾರೆ, ಮಗುವಿಗೆ ಊಟವಿಟ್ಟು ಬೆಳೆಸಿದ್ದಾರೆಂದು, ಬೆಳೆದವನಿಗೆ ಕಿರುಕುಳ ಕೊಟ್ಟರೆ ಯಾರು ಸಹಿಸಲ್ಲ ಎಂದು ಗುಡುಗಿದರು.

ನಾನೊಬ್ಬ ಮಂತ್ರಿ, ನನಗೂ ಬೆಲೆಯಿದೆ. ನಾವೇನು ಹೂಳಾ ಪಾರ್ಟಿಯಲ್ಲ. ಏನೋ ಸಂಬಂಧಿ, ಸ್ನೇಹಿತ ಮನೋಭಾವದಿಂದ ಎಲ್ಲಾ ಟೀಕೆಗಳನ್ನು ಮನ್ನಿಸಿದ್ದೇನೆ, ಇನ್ನು ಒಂದು ವರ್ಷ ನೋಡ್ತೇನೆ, ಹಾಗೆ ಇದ್ದರೆ ನಾನೇನು ಮಾಡೋಕೆ ಆಗಲ್ಲ ಎಂದು ಸಂಸದ ಎಸ್ ಮುನಿಸ್ವಾಮಿ ಅವರ “ನಾಗೇಶ್ ಅವರು ಕೊತ್ತೂರು ಮಂಜುನಾಥ್ ರನ್ನ ಮರೆಯಬಾರದು” ಎಂಬ ಹೇಳಿಕೆಗೆ ತಿರುಗೇಟು ನೀಡಿದರು.
ನಾನು ಕಾಲೇಜಿನಲ್ಲೆ ಯೂತ್ ಲೀಡರ್
ನಾನು ಕಾಲೇಜಿನಲ್ಲೆ ಯೂತ್ ಲೀಡರ್, ರಾಜಕೀಯ ನನಗೂ ಗೊತ್ತಿದೆ ಎಂದ ನಾಗೇಶ್, ಮುಳಬಾಗಿಲು ಕ್ಷೇತ್ರದಲ್ಲಿ ಅಲ್ಲದೆ ಕೋಲಾರ ಜಿಲ್ಲೆಯಲ್ಲಿ ನನಗ್ಯಾರು ರಾಜಕೀಯ ವಿರೋಧಿಗಳು ಇಲ್ಲ.
ಆದರೆ ನನ್ನಿಂದ ದೂರವಿರುವ ಕೆಲವರು ನನನ್ನು ಮಣಿಸಲು ಪ್ರಯತ್ನ ಮಾಡ್ತಿದ್ದಾರೆ. ನನಗೂ ಎಲ್ಲವು ಗೊತ್ತಿದೆ. ಕಾಲೇಜಿನಲ್ಲೇ ನಾನು ಲೀಡರ್ ಆಗಿದ್ದವನು ಎಂದ್ರು.
ನನಗೂ ತಂತ್ರಗಾರಿಕೆ ಮಾಡೋದು ಗೊತ್ತಿದೆ, ಎಲ್ಲವನ್ನು ಹೇಳಿ ಮಾಡಲ್ಲ ನಾನು ಆಟ ಆರಂಭಿಸಿದ್ದೇನೆ, ಪ್ರೊಡಕ್ಷನ್ ನಂದೆ, ಡೈರೆಕ್ಷನ್ ನಂದೆ, ಉಪೇಂದ್ರ ‘ಎ’ ಸಿನಿಮಾ ಹಾಗೆ ಪ್ರತಿ ಸೀನ್ನ ಲ್ಲೂ ನನ್ನದು ಸಸ್ಪೆನ್ಸ್ ಇರುತ್ತೆ ಕಾದು ನೋಡಿ ಎಂದು ಸಿನಿಮಾ ಡೈಲಾಗ್ ಹೊಡೆದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel