ಹಲವು ಕಾಯಿಲೆಗಳಿಗೆ ಮದ್ದು ಹಾಗಲಕಾಯಿ
ಹಾಗಲಕಾಯಿ ಅಂದ್ರೆ ಮೂಗು ಮುರಿಯುವವರ ನಡುವೆ ಹಾಗಲಕಾಯಿ ಅಂದ್ರೆ ಇಷ್ಟಪಡುವ ಜನರು ಕೂಡಾ ಇದ್ದಾರೆ.
ಆದ್ರೆ ಎಷ್ಟುಜನರಿಗೆ ಹಲವಾರು ಕಾಯಿಲೆಗಳಿಗೆ ಹಾಗಲಕಾಯಿ ಮನೆ ಮದ್ದು ಎಂದು ತಿಳಿದಿದ್ದರು, ಆ ಕಾಯಿಲೆಗಳು ಯಾವು ಎಂದು ತಿಳಿಯದೆ ಇರುವವರೆ ಹೆಚ್ಚು.
ಆದರೆ ಚಿಂತಿಸ ಬೇಡಿ ಇಂದು ನಾವು ನಿಮಗಾಗಿ ಅದರ ಬಗ್ಗೆ ಮಾಹಿತಿ ಹೊತ್ತು ತಂದಿದ್ದೆವೆ.
ಹೌದು…
ಹಾಗಲಕಾಯಿಯು ಹಲವಾರು ರೋಗಕ್ಕೆ ಮದ್ದು.
ವಿಟಮಿನ್ ʼಎʼ ಮತ್ತು ವಿಟಮಿನ್ ʼಸಿʼ ಇದ್ದು ಇದು ರೋಗನಿರೋದಕ ಶಕ್ತಿಯನ್ನುಉಲ್ಬಣಗೊಳಿಸುತ್ತದೆ.
ಹಾಗಲಕಾಯಿ ಹೃದಯಕ್ಕೆ ಉತ್ತಮವಾದದ್ದು .
ಕಿಡ್ನಿ ಸ್ಟೊನ್ ಕರಗಿಸುವಲ್ಲಿ ಹಾಗಲಕಾಯಿ ಮಹತ್ವದ ಪಾತ್ರ ವಹಿಸುತ್ತದೆ.
ಇದಕ್ಕೆ ಜೇನುತುಪ್ಪದೊಂದಿಗೆ ಹಾಗಲಕಾಯಿಯ ರಸವನ್ನು ಸೇವಿಸುವುದರ ಮೂಲಕ
ಕಿಡ್ನಿಯಲ್ಲಿನ ಕಲ್ಲು ಕರಗಿ ಶರೀರದಿಂದ ಹೊರಬರಲು ಸಹಾಯವಾಗುತ್ತದೆ.
ಹಾಗಲ ಕಾಯಿಯು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ತಲೇ ನೊವು ಇದ್ದರೆ ಹಾಗಲಕಾಯಿ ರಾಮಬಾಣವಿದ್ದಂತೆ. ತಲೆ ನೋವು ಬಂದಾಗ ಹಾಗಲಕಾಯಿ ಎಣೆ ಹಚ್ಚುವುದರಿಂದ ನೊವು ಕಡಿಮೆಯಾಗುತ್ತದೆ.
ಬೊಜ್ಜು ಕಡಿಮೆ ಮಾಡುವ ಯೋಜನೆ ಹೊಂದಿದ್ದಲ್ಲಿ ಹಾಗಲಕಾಯಿ ನಿಮಗೆ ಸಹಾಯಕಾರಿ ,
ನಿಂಬೆ ರಸದೊಂದಿಗೆ ಹಾಗಲಕಾಯಿ ರಸ ಬೆರಸಿ ಸೇವಿಸುವುದರಿಂದ ಬೇಡವಾದ ಬೊಜ್ಜು ಕಡಿಮೆ ಮಾಡಬಹುದು.
ಪಾಶ್ವವಾಯು (ಪ್ಯರಾಲಿಸಿಸ್) ಹೊಂದಿದವರಿಗೆ ಕಚ್ಚಾ ಹಾಗಲಕಾಯಿ ಉಪಯುಕ್ತಕರವಾಗಿದೆ.
ಮಧುಮೇಹ (ಸಕ್ಕರೆ ಕಾಯಿಲೆ) ಕಾಯಿಲೆ ಇರುವವರಿಗೆ ಉತ್ತಮ ಮನೆ ಮದ್ದು ಹಾಗಲಕಾಯಿಯಾಗಿದೆ.
ಅಸ್ತಮಾ ಹೊಂದಿರುವವರು ಅಸ್ತ್ಮಾವನ್ನು ಗುಣಪಡಿಸುವಲ್ಲಿ ಈ ಹಾಗಲಕಾಯಿಯನ್ನು ಮಸಾಲೆ ಇಲ್ಲದೆ ಸೆವಿಸುವುದು ಅವಶ್ಯಕವಾಗಿದೆ.
ಹಾಗಲಕಾಯಿ ರಂಜಕದ ಅಂಶ ಹೆಚ್ಚಾಗಿದೆ ಇದು ಕಫ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ಸಂಧಿವಾತವಿದ್ದಲ್ಲಿ ಹಾಗಲಕಾಯಿ ರಸವನ್ನು ಸಂಧಿವಾತ, ಕೈ ಕಾಲುಗಳಿಗೆ ಮಸಾಜ ಮಾಡುವುದರಿಂದ ಪರಿಹಾರ ಕಚಿತವಾಗಿದೆ.