ಹೈಟಿಯಲ್ಲಿ ಇಂಧನ ಟ್ರಕ್ ಸ್ಫೋಟ : ಕನಿಷ್ಠ 60 ಜನ ಸಾವು
ಹೈಟಿ : ಹೈಟಿಯಲ್ಲಿ ಇಂಧನ ಟ್ರಕ್ ಸ್ಫೋಟದಿಂದಾಗಿ ಕನಿಷ್ಠ 60 ಜನರು ಜೀವ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ.. ಇನ್ನೂ ಅವಶೇಷಗಳಡಿ ಅನೇಕರು ಸಿಲುಕಿರುವ ಸಾಧ್ಯತೆಯಿದ್ದು, ಅಗ್ನಿಶಾಮಕದಳ ಸಿಬ್ಬಂದಿ ಪೊಲೀಸರಿಂದ ಶೋಧ ಕಾರ್ಯಾಚರಣೆಯು ಮುಂದುವರೆದಿದೆ. ಇನ್ನೂ ವಾಹನವು ನಿಂತಿರುವಾಗ ಅಂದ್ರೆ ಸ್ಪೋಟಕ್ಕೂ ಮುನ್ನ ಸ್ಥಳೀಯ ನಿವಾಸಿಗಳು ವಾಹನದಿಂದ ಇಂಧನ ಕದಿಯಲು ಪ್ರಯತ್ನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಅನೇಕರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ..
ಮಂಗಳವಾರ ರಾತ್ರಿಯ ಸ್ಫೋಟದ ಸ್ಥಳದಲ್ಲಿ ನೂರಾರು ಜನರು ಇದ್ದರು ಎನ್ನಲಾಗಿದೆ.. ಕಟ್ಟಡಗಳು ಕಸುದಿಬಿದ್ದಿದ್ದು, ಅವಶೇಷಗಳಡಿ ಸಿಲುಕಿರುವವರ ಶೋಧ ಮುಂದುವರೆದಿದೆ.. ಇತ್ತ ಸ್ಥಳದಲ್ಲಿ ಅಪಘಾತದಲ್ಲಿ ಸಿಲುಕಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.. ಈ ಟ್ರಕ್ ದ್ವಿಚಕ್ರ ವಾಹನಕ್ಕೆ ಗುದ್ದುವುದನ್ನ ತಪ್ಪಿಸಲು ಹೋದಾಗ ಪಲ್ಟಿಯಾದ ಪರಿಣಾಮ ಈ ಅನಾಹುತ ಸಂಭವಿಸಿರೋದಾಗಿ ವರದಿಯಾಗಿದೆ..
ಸ್ಫೋಟ ಸಂಭವಿಸಿದಾಗ ಸ್ಥಳೀಯ ನಿವಾಸಿಗಳು ಟ್ರಕ್ ಬಳಿಯೇ ಮುತ್ತಿಕೊಂಡಿದ್ದರು ಎಂದು ಕ್ಯಾಪ್-ಹೈಟಿಯನ್ ಮುನ್ಸಿಪಲ್ ಕಮಿಷನ್‌ನ ಪ್ಯಾಟ್ರಿಕ್ ಅಲ್ಮೊನರ್ ಹೇಳಿರುವುದಾಗಿ ಹೈಟಿಯ ಪತ್ರಿಕೆ ಲೆ ನೌವೆಲ್ಲಿಸ್ಟೆ ಉಲ್ಲೇಖಿಸಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ತೀವ್ರ ಇಂಧನ ಕೊರತೆಯಿಂದಾಗಿ ಅನೇಕ ಹೈಟಿಯನ್ನರು ಗ್ಯಾಸೋಲಿನ್ ಪೂರೈಕೆ ವ್ಯತ್ಯದಿಂದಾಗಿ ಹತಾಶರಾಗಿದ್ದಾರೆ..
ಸ್ಫೋಟದಿಂದ ಹತ್ತಿರದ ಮನೆಗಳು ಮತ್ತು ಅಂಗಡಿಗಳು ಹಾನಿಗೊಳಗಾಗಿವೆ ಮತ್ತು ಅನೇಕ ಮೋಟಾರ್ ಬೈಕ್ ಮತ್ತು ಕಾರುಗಳು ನಾಶವಾಗಿವೆ. ಪ್ರಧಾನ ಮಂತ್ರಿ ಏರಿಯಲ್ ಹೆನ್ರಿ ಜಸ್ಟಿನಿಯನ್ ಯೂನಿವರ್ಸಿಟಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಅಲ್ಲಿ ಹೆಚ್ಚಿನ ಸಂತ್ರಸ್ತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ಕು ಜನರು ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು 15 ಜನರನ್ನು ಇತರೇ ಹೈಟೆಕ್ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.. ಜುಲೈನಲ್ಲಿ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರ ಹತ್ಯೆಯ ನಂತರ ರಾಜಕೀಯ ದೌರ್ಬಲ್ಯತೆ ಸೃಷ್ಟಿಯಾಗಿದ್ದು , ಆಗುಂತಕರ ಸಂಘಟೆಗಳು ಬಲಿಷ್ಠವಾಗಿವೆ.. ಹೀಗೆ ನಾನಾ ಕಾರಣಗಳಿಂದ ಮೊದಲೇ ಬಡತನದಲ್ಲಿ ಬೇಯುತ್ತಿರುವ ಟೈಟಿಯ ಜನರಲ್ಲಿ ಇಂಧನನ ಸಮಸ್ಯೆಯೂ ತಲೆ ದೂರಿದೆ.. ಅಲ್ಲದೇ ಆಗಸ್ಟ್‌ನಲ್ಲಿ ಹೈಟಿಯಲ್ಲಿ ವಿನಾಶಕಾರಿ ಭೂಕಂಪನ ಸಂಭವಿಸಿ ಸುಮಾರು 2,000 ಕ್ಕೂ ಹೆಚ್ಚು ಜನರು ಸಾವನಪ್ಪಿದ್ರೆ , ಅನೇಕರು ಮನೆಗಳನ್ನ ಕಳೆದುಕೊಂಡು ಬೀದಿಗೆ ಬಂದಿದ್ರು..