Halal | ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಚಾಲನೆ
ಬೆಂಗಳೂರು : ರಾಜ್ಯದಲ್ಲಿ ಮತ್ತೊಮ್ಮೆ ಧರ್ಮದ ದಂಗಲ್ ಶುರುವಾಗಿದೆ.
ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿರುವ ಸಂದರ್ಭದಲ್ಲಿ ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಹಿಂದೂ ಸಂಘಟನೆಗಳಿಂದ ಚಾಲನೆ ನೀಡಲಾಗಿದೆ.
ಬಸವೇಶ್ವರನಗರದ ಮ್ಯಾಕ್ ಡೊನಾಲ್ಡ್ ಮುಂದೆ ಅಭಿಯಾನಕ್ಕೆ ಚಾಲನೆ ನೀಡಿದ ಹಿಂದೂಪರ ಸಂಘಟನೆಗಳು, ಈ ಬಾರಿ ದೀಪಾವಳಿಗೆ ಮುಸ್ಲಿಂ ವ್ಯಾಪಾರಿಗಳ ಜೊತೆ ವ್ಯವಹಾರ ಬೇಡ ಎಂದಿದ್ದಾರೆ.
ಹಿಂದೂಗಳ ಅಂಗಡಿಯಿಂದಲೇ ದೀಪಾವಳಿ ಶಾಪಿಂಗ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಹಲಾಲ್ ಮುಕ್ತ ವ್ಯವಹಾರಕ್ಕಾಗಿ ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರಗಳ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಪ್ರತಿ ಮನೆಗಳಿಗೆ ಅಂಗಡಿ ಮಹಿಳಾ ಘಟನೆಗಳಿಗೆ ಭೇಟಿ ಮಾಡಿ ಜನರಲ್ಲಿ ಹಲಾಲ್ ಬಾಯ್ಕಾಟ್ ಅರಿವು ಮೂಡಿಸುತ್ತಿದ್ದಾರೆ.
ಈ ಅಭಿಯಾನದಲ್ಲಿ ಹಿಂದೂ ಜನ ಜಾಗೃತಿ ಸಂಘಟನೆ, ಭಜರಂಗದಳ, ಶ್ರೀರಾಮಸೇನೆ ಸೇರಿದಂತೆ ಹಲವು ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.