Halal: ಹಲಾಲ್ ಎನ್ನುವುದು ಒಂದು ಆರ್ಥಿಕ ಜಿಹಾದ್ : ಸಿ ಟಿ ರವಿ

1 min read
C T Ravi Saaksha Tv

ಹಲಾಲ್ ಎನ್ನುವುದು ಒಂದು ಆರ್ಥಿಕ ಜಿಹಾದ್ : ಸಿ ಟಿ ರವಿ

ಬೆಂಗಳೂರು: ಹಲಾಲ್ ಎನ್ನುವುದು ಒಂದು ಆರ್ಥಿಕ ಜಿಹಾದ್. ಆರ್ಥಿಕ ಜಿಹಾದ್ ಅಂದರೆ ಮುಸ್ಲಿಮರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಎಂದು ಶಾಸಕ ಸಿ.ಟಿ ರವಿ ಹೇಳಿದ್ದಾರೆ.

ಹಿಂದು ಸಂಘಟನೆಗಳು ಹಲಾಲ್  ಮಾಂಸಕ್ಕೆ ಬಹಿಷ್ಕಾರ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್ಥಿಕ ಜಿಹಾದ್ ಅಂದರೆ ಮುಸ್ಲಿಮರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಅಂತ ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ. ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ತಪ್ಪೇನು? ಹಲಾಲ್ ಮಾಂಸ ಅವರ ದೇವರಿಗೆ ಒಪ್ಪಿಸಿದ್ದು ಅವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು ಎಂದು ಹೇಳಿದರು.

ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಗೆ ಹೇಳುವ ರೈಟ್ಸ್ ಇದೆಯೋ ಹಾಗೇ. ಅದನ್ನ ಬಹಿಷ್ಕಾರಿಸಿ ಅಂತ ಹೇಳುವ ರೈಟ್ಸ್ ನಮಗಿದೆ. ಹಲಾಲ್ ಅಂದರೆ ಮುಸ್ಲಿಂರ ಧಾರ್ಮಿಕ ಕ್ರಿಯೆ. ಅದು ಅವರಿಗೆ ಪ್ರಿಯವಾಗಿರುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಅಂತ ಏನಾದರೂ ಇದ್ಯಾ? ಎಂದು ಪ್ರಶ್ನಿಸಿದರು.

ಇನ್ನೂ ಸಮಾರಸ್ಯವನ್ನು ಹೇರುವುದಕ್ಕೆ ಬರುವುದಿಲ್ಲ. ಹಾಗಂತ ಸಮಾರಸ್ಯ ಒನ್ ವೇ ಅಲ್ಲ, ಅದು ಟೂ ವೇ. ಹಲಾಲ್ ಇಲ್ಲದ ಮಾಂಸ ಅವರು ತಿನ್ನುವುದಕ್ಕೆ ರೆಡಿಯಾದರೆ, ಹಲಾಲ್ ಆಗಿರುವ ಮಾಂಸ ಇವರು ತಿನ್ನುತ್ತಾರೆ. ಈ ಹಿಂದೆ ಇರುವಂತ ನಿಯಮಗಳನ್ನೆಲ್ಲಾ ಈಗಲೂ ಒಪ್ಪಿಕೊಳ್ಳಲು ಆಗುತ್ತಾ? ಒಬ್ಬ ಹಿಂದೂ ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಬಂದು ತಗೋತಾರಾ? ಮುಸ್ಲಿಂರ ಅಂಗಡಿಯಲ್ಲಿ ತೆಗೆದುಕೊಳ್ಳಬೇಕು ಅಂತ ನೀವು ಯಾಕೆ ಹೇಳುತ್ತೀರಾ? ಹೇಳುವುದಕ್ಕೆ ಏನು ರೈಟ್ಸ್ ಇದೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd