Halal: ಹಲಾಲ್ ಉತ್ಪನ್ನ ಮತ್ತು ಮಾರಾಟ ಮೂಲಭೂತ ಹಕ್ಕು ಉಲ್ಲಂಘೆನೆ | ನಿಷೇಧಿಸುವಂತೆ ಸುಪ್ರಿಂಗೆ ಅರ್ಜಿ

1 min read
Supreme Court

ಹಲಾಲ್ ಉತ್ಪನ್ನ ಮತ್ತು ಮಾರಾಟ ಮೂಲಭೂತ ಹಕ್ಕು ಉಲ್ಲಂಘೆನೆ | ನಿಷೇಧಿಸುವಂತೆ ಸುಪ್ರಿಂಗೆ ಅರ್ಜಿ

ನವದೆಹಲಿ: ಹಲಾಲ್ ಉತ್ಪನ್ನಗಳು ಮತ್ತು ಹಲಾಲ್ ಪ್ರಮಾಣೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಸುಪ್ರೀಂಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಯಾಗಿದೆ.

ವಕೀಲ ವಿಭೋರ್ ಆನಂದ ಎಂಬುವುರು ಅರ್ಜಿಯನ್ನು ಸಲ್ಲಿಸಿದ್ದು, ಹಲಾಲ್ ಮಾರಾಟ ಮಾಡುವುದು ಸಂವಿಧಾನದ 14 ಹಾಗೂ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಮನವಿ ಮಾಡಿದ್ದಾರೆ.

ದೇಶದಲ್ಲಿ ಹಲಾಲ್ ಉತ್ಪನ್ನಗಳನ್ನು ಬಳಸುವ 15% ಜನಸಂಖ್ಯೆಯ ಸಲುವಾಗಿ 85% ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಇನ್ನೂ ಅರ್ಜಿಯಲ್ಲಿ ದೇಶದಲ್ಲಿ 1974ರಲ್ಲಿ ಹಲಾಲ್ ಪ್ರಮಾಣೀಕರಣ ವ್ಯವಸ್ಥೆ ಆರಂಭವಾಯಿತು. ಮೊದಲಿಗೆ ಇದು ಮಾಂಸದ ಉತ್ಪನ್ನಗಳಿಗೆ ಸೀಮಿತವಾಗಿತ್ತು. ಈಗ ಫಾರ್ಮಾಸ್ಯುಟಿಕಲ್ಸ್, ಕಾಸ್ಮೆಟಿಕ್ಸ್, ಆರೋಗ್ಯ ಉತ್ಪನ್ನಗಳು, ಟಾಯ್ಲೆಟರಿ, ವೈದ್ಯಕೀಯ ಉಪಕರಣಗಳಿಗೂ ಹಲಾಲ್ ಪ್ರಮಾಣೀಕರಣ ನೀಡಲಾಗುತ್ತಿದೆ.

ಹಲಾಲ್ ಸ್ನೇಹಿ ಪ್ರವಾಸೋದ್ಯಮ, ಮೆಡಿಕಲ್ ಟೂರಿಸಂ, ಉಗ್ರಾಣ ಪ್ರಮಾಣೀಕರಣ, ಹಲಾಲ್ ರೆಸ್ಟೋರೆಂಟ್‍ಗಳು, ಹಲಾಲ್ ಟ್ರೇನಿಂಗ್ ಇತ್ಯಾದಿಗಳು ಕೂಡ ಆರಂಭವಾಗಿದೆ. ಇಷ್ಟೇ ಅಲ್ಲದೇ ಸರಕು ಸಾಗಣೆ, ಮಾಧ್ಯಮ, ಬ್ರ್ಯಾಂಡಿಂಗ್ ಹಾಗೂ ಮಾರ್ಕೆಟಿಂಗ್ ಕ್ಷೇತ್ರಕ್ಕೂ ಹಲಾಲ್ ಕಾಲಿಟ್ಟಿದೆ.

Halal Saaksha Tv

ಇಸ್ಲಾಮಿನ ಪ್ರಕಾರ ಹಲಾಲ್ ಎಂಬ ಪದವು ಅನುಮತಿಸಲಾದ ಅಥವಾ ಕಾನೂನುಬದ್ಧವಾಗಿದೆ ಎಂದರ್ಥವಾಗಿದೆ. ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಇದು ಸಂವಿಧಾನದಲ್ಲೂ ಉಲ್ಲೇಖವಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರ ಮೇಲೂ ಒಂದು ಧರ್ಮದ ನಂಬಿಕೆಯನ್ನು ಹೇರಿಕೆ ಮಾಡುವುದು ಸರಿಯಲ್ಲ. ಇದರಿಂದಾಗಿ ದೇಶಾದ್ಯಂತ ಹಲಾಲ್ ಉತ್ಪನ್ನಗಳನ್ನು ಹಾಗೂ ಹಲಾಲ್ ಪ್ರಮಾಣೀಕರಣವನ್ನು ನಿಷೇಧಿಸಬೇಕು.

ಕೆಎಫ್‍ಸಿ, ನೆಸ್ಲೆ, ಬ್ರಿಟಾನಿಯಾ ಹಾಗೂ ಇತರೆ ಕಂಪನಿಗಳಿಗೆ ಹಲಾಲ್ ಪ್ರಮಾಣೀಕೃತ ಆಹಾರಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಸೂಚಿಸಬೇಕು. ಆಹಾರೋತ್ಪನ್ನಗಳಿಗೆ ಪ್ರಮಾಣೀಕರಣ ನೀಡಲೆಂದೇ ಸರ್ಕಾರ ಆಹಾರ ಸುರಕ್ಷತೆ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ಇರುವಾಗ ಅನಧಿಕೃತ ಹಲಾಲ್ ಪ್ರಮಾಣೀಕರಣ ವ್ಯವಸ್ಥೆ ಏಕಿರಬೇಕು ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd