ಐತಿಹಾಸಿಕ ಹಂಪಿ ಉತ್ಸವ ಸಮೀಪದಲ್ಲಿರುವ ಹಿನ್ನೆಲೆ ಸರಳ ದಸರಾ ಮಾದರಿಯಲ್ಲಿ ಹಂಪಿ ಉತ್ಸವ ನಡೆಸಬೇಕೆಂದು ಕನ್ನಡ ಸಂಘಟನೆಗಳು ಒತ್ತಾಯಿಸಿವೆ. ಯಾವುದೇ ಕಾರಣಕ್ಕೂ ಹಂಪಿ ಉತ್ಸವ ತಡೆ ಹಿಡಿಯಬಾರದು. ಕಡ್ಡಾಯವಾಗಿ ಮೂರು ದಿನಗಳ ಕಾಲ ಅಚರಣೆ ನಡೆಸಬೇಕು. ವಿಶ್ವ ಪಾರಂಪರಿಕ ತಾಣ ಹಂಪಿಯ ಬಗ್ಗೆ ನಿರ್ಲಕ್ಷ ಧೋರಣೆ ಸಲ್ಲದು. ಹಂಪಿ ಉತ್ಸವ ನಿಲ್ಲಿಸಬಾರದು ಎಂದು ಆಗ್ರಹಿಸಿದ್ದಾರೆ.
ಇನ್ನೂ ಕೊವಿಡ್ ಇದ್ದರೂ ಸರಳ ದಸರಾ ಆಚರಿಸಲಾಗುತ್ತಿದೆ. ಹೀಗಾಗಿಯೇ ಸರಳ ದಸರಾ ಮಾದರಿಯಲ್ಲಿಯೇ ಹಂಪಿ ಉತ್ಸವ ನಡೆಸಬೇಕು. ಹಂಪಿ ಉತ್ಸವ ನಿಲ್ಲಿಸಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಬಳ್ಳಾರಿಯಲ್ಲಿ ಕನ್ನಡ ಸಂಘಟನೆಗಳು ಎಚ್ಚರಿಸಿವೆ.








