ಹಳೆಯ ಕಾಲದ ಹ್ಯಾಂಡ್ ಗ್ರೆನೇಡ್ ಪತ್ತೆ Saaksha Tv
ಹಾವೇರಿ: ಖಾಲಿ ಜಾಗದಲ್ಲಿ ಸ್ವಚ್ಛಗೊಳಿಸುತ್ತರಿವಾಗ ಹಳೆ ಕಾಲದ ಹ್ಯಾಂಡ್ ಗ್ರೆನೇಡ್ ಒಂದು ಪತ್ತೆಯಾಗಿದೆ. ಇದು ನಗರದ ನೇತಾಜಿ ನಗರದಲ್ಲಿ ಪತ್ತೆಯಾಗಿದೆ.
ಈ ಜಾಗವು ರವಿ ಮುಷ್ಠಗಿಯವರಿಗೆ ಸೇರಿದ್ದು, ಮನೆ ಕಟ್ಟಲೆಂದು ಸ್ವಚ್ಛಗೊಳಿಸುತ್ತಿದ್ದರು. ಈ ಸಮಯದಲ್ಲಿ ಹ್ಯಾಂಡ್ ಗ್ರನೇಡ್ ಸಿಕ್ಕಿದೆ, ಇದನ್ನು ಹಿಂದಿನ ಕಾಲದಲ್ಲಿ ದೊಂಬಿ ನಡೆದಾಗ ಪೊಲೀಸರು ಬಳಸುತ್ತಿದ್ದರು ಎನ್ನಲಾಗುತ್ತಿದೆ.
ಸ್ಥಳಕ್ಕೆ ನಗರದ ಠಾಣೆ ಪೊಲೀಸರು ಮತ್ತು ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಎಫ್ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುವುದು ಎಂದು ಎಸ್ ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.









