pm-narendra-modi | ಮೋದಿ ಬರ್ತ್ ಡೇ ಸ್ಪೇಷಲ್ : ಅವರು ಆರ್ಮಿಯಲ್ಲಿ ಯಾಕೆ ಸೇರಲಿಲ್ಲ ಗೊತ್ತಾ ?
ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದ ಪ್ರಧಾನಿಯಾಗಿ, ಗ್ಲೋಬರ್ ಫೇಮ್ ಪಡೆಯುತ್ತಿದ್ದಾರೆ ಪ್ರಧಾನಿ ಮೋದಿ. ಅವರು ತೆಗೆದುಕೊಳ್ಳುವ ನಿರ್ಧಾರಗಳು.. ಅವರ ನಡೆಯನ್ನು ನಮ್ಮ ದೇಶ ಹೆಚ್ಚು ಆಸಕ್ತಿಯಿಂದ ಗಮನಿಸುತ್ತಿರುತ್ತದೆ. ಇಂದು ಅವರ ಜನ್ಮದಿನ. 73ನೇ ವಸಂತಕ್ಕೆ ಕಾಲಿಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಬಗ್ಗೆ ಪ್ರತ್ಯೇಕ ಕಥನ ಇಲ್ಲಿದೆ..
ಭಾರತಕ್ಕೆ ಸ್ವತಂತ್ರ್ಯ ಬಂದ ಮೂರು ವರ್ಷಗಳ ನಂತರ.. ದೇಶ ಗಣತಂತ್ರವಾದ ಕೆಲವು ತಿಂಗಳಲ್ಲಿ ನರೇಂದ್ರ ಮೋದಿ ಜನಿಸಿದರು.
ಉತ್ತರ ಗುಜರಾತ್ ನ ವಾದ್ ನಗರ್ ನಲ್ಲಿ ಸೆಪ್ಟಂಬರ್ 17, 1950 ರಲ್ಲಿ ದಾಮೋದರ್ ದಾಸ್ ಮೋದಿ, ಹೀರಾಬಾ ಮೋದಿ ದಂಪತಿಗೆ ನರೇಂದ್ರ ದಾಮೋದರ್ ದಾಸ್ ಮೋದಿ ಜನಿಸಿದರು. ಆರು ಮಂದಿ ಸಂತಾನದಲ್ಲಿ ಮೋದಿ ಮೂರನೇಯವರು.
ತಮ್ಮ ಚಿಕ್ಕವಯಸ್ಸಿನಲ್ಲಿ ತಂದೆ ಅನುಭವಿಸಿದ ಕಷ್ಟಗಳನ್ನು, ಹಾಗೇ ಮನೆ ಸಾಗಿಸಲು ತಾಯಿ ಬೇರೆ ಮನೆಗಳಲ್ಲಿ ಕೆಲಸ ಮಾಡಿದ್ದನ್ನ ಮೋದಿ ಅವರು ಇಂದಿಗೂ ನೆನೆಯುತ್ತಾರೆ. ತಮ್ಮ ತಂದೆ ಸ್ಥಳೀಯ ರೈಲ್ವೆ ಸ್ಟೇಷನ್ ನಲ್ಲಿ ಚಾಯ್ ಮಾರಿ ಜೀವನ ಸಾಗಿಸುತ್ತಿದ್ದರೆಂದು, ತಾವೂ ಕೂಡ ತಂದೆಗೆ ಸಹಾಯ ಮಾಡುತ್ತಿದ್ದೆ ಎಂಬುದಾಗಿ ಮೋದಿ ಹೇಳಿಕೊಂಡಿದ್ದಾರೆ.
ಆರ್ಮಿಯಲ್ಲಿ ಸೇರಬೇಕು ಎಂದಿದ್ದ ಮೋದಿ
ಹೌದು.. ! ನರೇಂದ್ರ ಮೋದಿ ಆರ್ಮಿಯಲ್ಲಿ ಸೇರಬೇಕು ಎಂದು ಕನಸು ಕಂಡಿದ್ದರು. ಜಾಮ್ ನಗರ್ ಸೈನಿಕ್ ಸ್ಕೂಲ್ ನಲ್ಲಿ ಸೇರಬೇಕು ಎಂದು ಪ್ರಯತ್ನಿಸಿದ್ರೂ ಕೂಡ. ಆದ್ರೆ ಆರ್ಥಿಕ ಸಮಸ್ಯೆಗಳಿಂದ ಆ ಕನಸು ಕನಸಾಗಿಯೇ ಉಳಿದು ಹೋಯ್ತು.

ಕೆಲಸಗಾರ
ಮಂತ್ರಿಗಳು, ಸಹ ನಾಯಕರು, ಕೊನೆಗೆ ಮೋದಿ ಅವರು ವೈಯುಕ್ತಿಕ ಸಿಬ್ಬಂದಿ ಕೂಡ ಅವರ ಬಗ್ಗೆ ಹೇಳುವುದು ಒಂದೇ ಮಾತು ಅದು ವಿರಾಮ ತೆಗೆದುಕೊಳ್ಳದ ಕೆಲಸಗಾರ ಎಂದು. ಆ ಕೆಲಸದಿಂದಲೇ ಅವರಿಂದ ನಿದ್ದೆ ದೂರವಾಗಿದೆ ಎಂದು, ಆದ್ರೆ ಯೋಗಾ ಪ್ರಾಣಾಯಾಮಗಳಿಂದ ತಮ್ಮ ಆರೋಗ್ಯವನ್ನು ಕಾಪಿಟ್ಟಿಕೊಂಡಿದ್ದಾರೆ ಎಂದು ಹೇಳುತ್ತಾರೆ.
ಉನ್ನತ ಹುದ್ದೆ, ಸ್ಥಾನದಲ್ಲಿರುವವರು ಒಂದು ಸಮಯದಲ್ಲಿ ವಿರಾಮ ತೆಗೆದುಕೊಳ್ಳುವುದನ್ನ ನಾವು ನೋಡಿದ್ದೇವೆ. ಆದ್ರೆ ನರೇಂದ್ರ ಮೋದಿ ಮಾತ್ರ ಗುಜರಾತ್ ಮುಖ್ಯಮಂತ್ರಿಯಾಗಿ, ಹದಿಮೂರು ವರ್ಷಗಳಲ್ಲಿ ಒಂದೇ ಒಂದು ರಜೆ ತೆಗೆದುಕೊಂಡಿಲ್ಲ. ಅಸಲಿಗೆ ಅವರು ಎಷ್ಟೇ ಅನಾರೋಗ್ಯಕ್ಕೆ ಈಡಾಗಿದ್ದರೂ ರಜೆ ತೆಗೆದುಕೊಂಡಿಲ್ಲ. ಈಗ ಪ್ರಧಾನಿಯಾಗಿ ಅವರು ಅದನ್ನೇ ಮುಂದುವರೆಸುತ್ತಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರಿಗೆ ಒಂಟಿ ಜೀವನ ಅಂದರೇ ಇಷ್ಟ. ಮೋದಿ ತಮ್ಮ ಕಾಲೇಜು ಜೀವನವನ್ನ ಪಕ್ಕಕ್ಕೆ ಇಟ್ಟು, ಸಂಚಾರಿಯಾಗಿ ಕೊಲ್ಕತ್ತಾ ಬೆಲೂರ್ ಮಠಕ್ಕೆ ಪ್ರಯಾಣ ಬೆಳೆಸಿದ್ದರು. ಆದ್ರೆ ತಮ್ಮ 28 ನೇ ವರ್ಷದಲ್ಲಿ ಡೆಲ್ಲಿ ಯೂನಿವರ್ಸಿಟಿಯಲ್ಲಿ ತಮ್ಮ ಗ್ರಾಡ್ಯುಯೇಷನ್ ಪೂರ್ತಿಗೊಳಿಸಿದ್ದಾರೆ. ಇನ್ನು ಇಮೇಜ್ ಮ್ಯಾನೇಜ್ ಮೆಂಟ್ ಅಂಡ್ ಪಬ್ಲಿಕ್ ರಿಲೆಷನ್ಸ್ ಕೋರ್ಸ್ ಗಾಗಿ ಮೂರು ತಿಂಗಳು ಅಮೆರಿಕಾದಲ್ಲಿದ್ದರು.
ವರ್ಕ್ ಹಾಲಿಕ್ ಆಗಿರುವ ಮೋದಿ ಅವರಿಗೆ ಸಿಗರೇಟ್ ನಂತಹ ಅಭ್ಯಾಸಗಳಿಲ್ಲ. ಪ್ರತಿನಿತ್ಯ ಯೋಗ ಮಾಡುವ ಅವರು, ಪಕ್ಕಾ ವೆಜಿಟೇರಿಯನ್. ಫೋಟೋಗ್ರಾಫಿ, ಕವಿತೆ – ಪದ್ಯಗಳನ್ನು ಬರೆಯುವುದು ಅಂದರೆ ಅವರಿಗೆ ಇಷ್ಟ.
ಆಡಳಿತದಲ್ಲಿ ತಮ್ಮದೇಯಾದ ಚಾಪು ಮೂಡಿಸುತ್ತಿರುವ ನರೇಂದ್ರ ಮೋದಿ ಅವರು ಈಗ ಗ್ಲೋಬಲ್ ಲೀಡರ್ ಆಗಿ ಅತ್ಯಧಿಕ ಫಾಲೋಯಿಂಗ್ ಇರುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.