ADVERTISEMENT
Thursday, June 19, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹ್ಯಾಪಿ ಬರ್ತ್ ಡೇ ಸಚಿನ್ ತೆಂಡುಲ್ಕರ್ – ನಿಮ್ಮ ಆಟಕ್ಕೊಂದು ಸಲಾಂ..!

admin by admin
April 24, 2021
in Newsbeat, Sports, ಕ್ರೀಡೆ
sachin tendulkar team india saakshatv
Share on FacebookShare on TwitterShare on WhatsappShare on Telegram

sachin tendulkar team india saakshatvಆತ  ಗಣಿತ ಪಂಡಿತನಲ್ಲ… ವಿಜ್ಞಾನಿಯೂ ಅಲ್ಲ.. ಸಂಶೋಧಕನೂ ಅಲ್ಲ… ಕಂಪ್ಯೂಟರ್‌ ತಜ್ಞನೂ ಅಲ್ಲ.. ಆದ್ರೆ ಆತ ಎಲ್ರರ ಲೆಕ್ಕಾಚಾರಗಳನ್ನ ದಾಟಿ ಆಡಿದವನು… ಆಟವನ್ನ ಕೇವಲ ಆಟವನ್ನಾಗಿದೇ, ಬದುಕನ್ನಾಗಿದವನು… ಆಟದಲ್ಲಿ ಯಾರು ಏರದ ಎತ್ತರಕ್ಕೇರಿದವನು.. ಅವನೇ ಬ್ಯಾಟಿಂಗ್ ಬಲಾಡ್ಯ ಸಚಿನ್ ತೆಂಡುಲ್ಕರ್‌

ನಮ್ಮ ಭವಿಷ್ಯ ಬ್ರಹ್ಮ ಬರೀತಾನಂತೆ..  ಆದ್ರೆ ಆತನ  ಲಿಪಿ ನಮಗೆ ಅರ್ಥ ಆಗೊಲ್ಲ.. ನಮ್ಮ ಬದುಕನ್ನ ನಾವೇ ಕಟ್ಟಿಕೊಳ್ಳುವುದಿದೆಯಲ್ಲಾ,  ಅದು ಬ್ರಹ್ಮ ಲಿಪಿಗಿಂತಲೂ ಮೀರಿದ್ದು.  ಇಂತಹ ಅಚ್ಚರಿಯನ್ನ ಸಾಧಿಸುವವರು  ತೀರಾ ವಿರಳ..  ಆದ್ರೆ  ಸಚಿನ್ ತೆಂಡುಲ್ಕರ್‌ ತನ್ನ ಭವಿಷ್ಯವನ್ನ ತಾನೇ ಬರ್ಕೊಂಡಿದ್ದಾರೆ.. ಇದೀಗ  ಅದು ಅಕ್ಷರಗಳಲ್ಲಿ ಬಣ್ಣಿಸಲ್ಪಡುತ್ತಿವೆ…

ನಿಜ,.. ಈ ಸಾಧಕನನ್ನು ವರ್ಣಿಸಲು ಪದಪುಂಜಗಳಿಲ್ಲ. ಮಾಡಿರುವ ಸಾಧನೆಗಳನ್ನ  ಲೆಕ್ಕ ಹಾಕಲು ಸಾಧ್ಯವಿಲ್ಲ. ಅಂಕಿ –ಅಂಶಗಳನ್ನ ಎಣಿಸೋಕೆ ಆಗಲ್ಲ.. ದಾಖಲೆಗಳನ್ನ ಕೈಬೆರಳಿನಲ್ಲಿ ಕೌಂಟ್‌ ಮಾಡಲು ಸಾಧ್ಯವಿಲ್ಲ.  ಬರೆಯೋಕೆ ಹೊರಟ್ರೆ ಪೆನ್ನು – ಕಾಗದಗಳು ಸಾಕಾಗೊಲ್ಲ. ಬಹುಶ: ಕಂಪ್ಯೂಟರ್‌ನ ಮೊಮೊರಿ ಕೂಡ ಫುಲ್  ಆಗೋದ್ರಲ್ಲಿ ಡೌಟ್ಟೇ ಇಲ್ಲ.

ಕ್ರಿಕೆಟ್‌ ಬ್ರಹ್ಮನ ಜಾತಕ

1617 ಪಂದ್ಯ

84,307  ರನ್‌ 

142 ಶತಕ

507 ಅರ್ಧಶತಕ

474 ವಿಕೆಟ್‌

sachin tendulkar team india saakshatvಅಂದ ಹಾಗೇ  ಸಚಿನ್ ತೆಂಡುಲ್ಕರ್‌  ಇಲ್ಲಿಯವರೆಗೆ ಒಟ್ಟು  1616 ಪಂದ್ಯಗಳನ್ನ ಆಡಿದ್ದಾರೆ. ಪೇರಿಸಿರುವ ರನ್‌ಗಳ ಸಂಖ್ಯೆ 84 ಸಾವಿರದ 307.. ಇದ್ರಲ್ಲಿ 142 ಶತಕ ಹಾಗೂ 507 ಅರ್ಧಶತಕಗಳಿವೆ.. ಅಷ್ಟೇ ಅಲ್ಲ, ಬೌಲಿಂಗ್‌ನಲ್ಲೂ ಜಾದು ಮಾಡಿರುವ ಸಚಿನ್ 474 ವಿಕೆಟ್ ಕಬಳಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಾಸ್ಟರ್‌  

ಇಲ್ಲಿಯವರೆಗೆ 199 ಟೆಸ್ಟ್‌  ಪಂದ್ಯಗಳನ್ನ ಆಡಿರುವ ಸಚಿನ್  15,847 ರನ್‌ ದಾಖಲಿಸಿದ್ದಾರೆ. 51 ಶತಕ ಹಾಗೂ 67 ಅರ್ಧಶತಕಗಳು ಸಚಿನ್ ಹೆಸರಿನಲ್ಲಿವೆ. ಹಾಗೇ 46 ವಿಕೆಟ್ ಕಬಳಿಸಿದ್ದಾರೆ. .

ಏಕದಿನ ಕ್ರಿಕೆಟ್‌ನಲ್ಲಿ ಕ್ರಿಕೆಟ್‌ ದೇವ್ರು 

ಆರು ವಿಶ್ವಕಪ್‌ ಸೇರಿದಂತೆ ಸಚಿನ್ 463 ಏಕದಿನ ಪಂದ್ಯಗಳನ್ನ ಆಡಿದ್ದಾರೆ. 49 ಶತಕ ಹಾಗೂ 96 ಅರ್ಧಶತಕಗಳು ಸೇರಿದಂತೆ ಒಟ್ಟು18,426 ರನ್‌ ಕಲೆ ಹಾಕಿದ್ದಾರೆ.  ಜತೆಗೆ 154 ವಿಕೆಟ್‌ ಬುಟ್ಟಿಗೆ ಹಾಕೊಂಡಿದ್ದಾರೆ.

Related posts

ಯಡಿಯೂರಪ್ಪ ನನಗೆ ಹಿರಿಯಣ್ಣನಿದ್ದಂತೆ: ಈಶ್ವರಪ್ಪ ಸ್ಪಷ್ಟನೆ, ರಾಜಕೀಯ  ಜರ್ನಿಗೆ ಹೊಸ ತಿರುವು?

ಯಡಿಯೂರಪ್ಪ ನನಗೆ ಹಿರಿಯಣ್ಣನಿದ್ದಂತೆ: ಈಶ್ವರಪ್ಪ ಸ್ಪಷ್ಟನೆ, ರಾಜಕೀಯ ಜರ್ನಿಗೆ ಹೊಸ ತಿರುವು?

June 19, 2025
ನಂದಿನಿ, ಅಮುಲ್… ಎರಡೂ ನಮ್ಮದೇ : ಸಿಟಿ ರವಿ ರಿಯಾಕ್ಷನ್

ನಂದಿನಿ, ಅಮುಲ್… ಎರಡೂ ನಮ್ಮದೇ : ಸಿಟಿ ರವಿ ರಿಯಾಕ್ಷನ್

June 19, 2025

Happy Birthday Sachin Tendulkar: fans wishes for ‘God of Cricket

ಫಸ್ಟ್‌ ಕ್ಲಾಸ್‌ ಕ್ರಿಕೆಟ್‌ನಲ್ಲಿ ತೆಂಡುಲ್ಕರ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಡುವೆಯೂ ಸಚಿನ್ 307 ಪ್ರಥಮ ದರ್ಜೆಯ ಪಂದ್ಯಗಳನ್ನ ಆಡಿದ್ದಾರೆ. ಇದ್ರಲ್ಲಿ81 ಶತಕ ಹಾಗು 114 ಅರ್ಧಶತಕಗಳಿವೆ.  70 ವಿಕೆಟ್‌ ಪಡೆದುಕೊಂಡು ಒಟ್ಟು 25, 228 ರನ್‌ ಕೂಡ ಹಾಕಿದ್ದಾರೆ.

ಲೀಸ್ಟ್‌ ಎ ಪಂದ್ಯಗಳಲ್ಲಿ ಮುಂಬೈಕರ್‌

551 ಲೀಸ್ಟ್‌ ಎ ಪಂದ್ಯಗಳನ್ನ ಅಡಿರುವ ತೆಂಡುಲ್ಕರ್‌ 21999 ರನ್‌ ಪೇರಿಸಿದ್ದಾರೆ. ಇದ್ರಲ್ಲಿ 60 ಶತಕ ಹಾಗೂ 114 ಅರ್ಧಶತಕಗಳು ಸೇರಿಕೊಂಡಿವೆ. 201 ವಿಕೆಟ್‌ಗಳು ಸಚಿನ್ ಮ್ಯಾಜಿಕ್‌ಗೆ ಬಲಿಯಾಗಿವೆ.

sachin tendulkar team india saakshatvಚುಟುಕು ಕ್ರಿಕೆಟ್‌ನಲ್ಲಿ ಬ್ಲ್ಯಾಸ್ಟರ್‌

ಸಚಿನ್ ಕೇವಲ ಒಂದೇ ಒಂದು ಟಿ-ಟ್ವೆಂಟಿ ಅಂತಾರಾಷ್ಟ್ರೀಯ ಪಂದ್ಯವನ್ನ ಆಡಿದ್ದಾರೆ. ಆದ್ರೆ ರನ್‌ ಗಳಿಸಿದ್ದು ಮಾತ್ರ ಹತ್ತು. ಹಾಗೇ 96 ಐಪಿಎಲ್‌ ಟಿ-ಟ್ವೆಂಂಟಿ ಪಂಧ್ಯಗಳನ್ನ ಆಡಿದ್ದು ಒಂದು ಶತಕ ಸಿಡಿಸಿದ್ದಾರೆ. 16 ಅರ್ಧಶತಕಗಳು ಸೇರಿದಂತೆ 2797 ರನ್‌ಗಳು  ಸಚಿನ್ ಬ್ಯಾಟಿಂಗ್‌ನಿಂದ ಹೊರಹೊಮ್ಮಿವೆ.

ಇಷ್ಟೆಲ್ಲಾ ಸಾಧನೆ, ದಾಖಲೆಗಳನ್ನ ಮಾಡಬೇಕಾದ್ರೆ ಸಚಿನ್‌ ಎಷ್ಟೊಂದು  ಕಷ್ಟಪಟ್ಟಿರಲಿಕ್ಕಿಲ್ಲ. .ಅದನ್ನ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಊಹಿಸಿಕೊಳ್ಳಲು ಆಗೊಲ್ಲ. ಯಾಕಂದ್ರೆ  ಈ ಸಾಧನೆಯ ಹಿಂದೆ ಆಗಾಧವಾದ ಪರಿಶ್ರಮವಿದೆ. ಅಪಾರವಾದ  ಶ್ರದ್ದೆ ಇದೆ. ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರಿಕೆ ಇದೆ. ಗಂಭೀರತೆ ಇದೆ.

ಇನ್ನು,  40ರ ಸಚಿನ್‌ 30 ವರ್ಷಗಳನ್ನ ಮೈದಾನದಲ್ಲಿ  ಕಳೆದಿದ್ದಾರೆ. ಯಾಕಂದ್ರೆ  ತೆಂಡುಲ್ಕರ್‌ಗೆ  ಮೈದಾನವೇ ಮನದ ಮನೆಯಾಗಿತ್ತು. ಅಪ್ಪನ ಅಕ್ಕರೆ, ಅಮ್ಮನ ಮಮತೆ, ಹೆಂಡತಿಯ ಪ್ರೀತಿ, ಮಕ್ಕಳ ವಾತ್ಸಲ್ಯಕ್ಕೆ ಮೀರಿ  ಅಣ್ಣನ ಆಶಯದ ಹಾದಿಯಲ್ಲಿ ಸಚಿನ್ ಮೈಮರೆತ್ರು. ಗುರುವಿನ ಗುರಿಯತ್ತ ಮುನ್ನಡೆದ್ರು.

sachin tendulkar team india saakshatvಹೌದು,  ಕ್ರಿಕೆಟ್‌ನ ಪ್ರತಿಯೊಂದು ಶಾಟ್ಸ್‌ ಗಳನ್ನ ಕಲಿಯಲು  ಸಚಿನ್‌  ಲೆಕ್ಕವಿಲ್ಲದಷ್ಟು ಬೆವರು ಸುರಿಸಿದ್ದಾರೆ.. ಬ್ಯಾಟಿಂಗ್‌ ಟಿಪ್ಸ್‌ ಗಳನ್ನ ಹಿರಿಯರಿಂದ ಕೇಳಿ ತಿಳಿದುಕೊಂಡಿದ್ದಾರೆ. ಹೊಸ ಹೊಸ ಶಾಟ್ಸ್‌‌ ಗಳನ್ನ ಅನ್ವೇಷನೆ ಕೂಡ ಮಾಡಿದ್ದಾರೆ. ಇನ್ನು,  ಬ್ಯಾಟಿಂಗ್‌ ತಾಲೀಮ್‌  ನಡೆಸುವಾಗ  ಎದುರಿಸಿದ ಚೆಂಡುಗಳನ್ನ ಬಹುಶಃ ಸಚಿನ್ ಕೂಡ ನೆನಪಿಟ್ಟುಕೊಂಡಿರಕ್ಕಿಲ್ಲ. ಆದ್ರೆ ನೆಟ್ಸ್‌ ನಲ್ಲಿ ತನಗೆ ಯಾರು ಯಾರು ಬೌಲಿಂಗ್‌  ಮಾಡಿದ್ದಾರೆ ಅಂತ ಸಚಿನ್‌ ಈಗಲೂ ನೆನಪಿಟ್ಟುಕೊಂಡಿದ್ದಾರೆ.

ಮೈದಾನದಲ್ಲಿ ರನ್‌ ಮೇಷಿನ್‌ ನಂತೆ  ರನ್‌ ಪೇರಿಸಿದ ಮಾಂತ್ರಿಕನ ಕೆಲವೊಂದು ಇನಿಂಗ್ಸ್‌ ಗಳು, ಎಂದು ಕಣ್ಣಂಚಿನಿಂದ ಮರೆಯಾಗುವುದಿಲ್ಲ.  ಸಚಿನ್ ಆಟ ನಿಲ್ಲಿಸಲು ಈಗ ತಯಾರು ಆಗಿರಬಹುದು.. ಆದ್ರೆ ಅವ್ರು ಆಡಿದ ಆಟ ಅವ್ರನ್ನುಕಾಡದೇ ಬಿಡುವುದಿಲ್ಲ.  ಚಿಕ್ಕಮಕ್ಕಳಿಂದ ಹಿಡಿದು ಪ್ರತಿಯೊಬ್ಬರ ಬಾಯಲ್ಲೂ ಇವತ್ತು ಸಚಿನ್ ಹೆಸರು ನಲಿದಾಡುತ್ತಿದೆ. ಅದಕ್ಕೆ ಕಾರಣ ಸಚಿನ್‌ಗೆ ಕ್ರಿಕೆಟ್‌ ಮೇಲಿರುವ ಪ್ರೀತಿಯಷ್ಟೇ.

ಅದೇನೇ ಇರಲಿ,  ಸಚಿನ್  ಅಂತಾರಾಷ್ಟ್ರೀಯ ಕ್ರಿಕೆಟ್‌ ಅಂಗಳಕ್ಕೆ  ಭರವಸೆ,  ಕನಸು ಮೂಡುವ ಮೊದಲೇ ಹೆಜ್ಜೆ ಇರಿಸಿ ಆಗಿತ್ತು. ಭರವಸೆ, ಕನಸು ಬಲಿತಂತೆ ಸಾಧನೆಯ ಹರವನ್ನ ವಿಸ್ತರಿಸುತ್ತಾ ಸಾಗಿದ್ರು.  ಅವ್ರು ಮೂಡಿಸಿದ  ಪ್ರತಿಯೊಂದು ಹೆಜ್ಜೆ ಯ ಗುರುತು ಮೈಲಿಗಲ್ಲಾದವು. ಮೀರಿ ನಿಲ್ಲುವ ಹಠಸಾಧಕನ ಎದೆ ಆರಂಭದಲ್ಲಿಯೇ  ಝಲ್‌ ಎನ್ನದಿರದು. ಒಂದೊಮ್ಮೆ ಮೀರಿದ್ರೆ ಅತಿಶಯವೇ.   happy birthday sachin

Tags: #god of cricket#saakshatvbcciCricketICCsachinSachin Tendulkarteam indiaworld cricket
ShareTweetSendShare
Join us on:

Related Posts

ಯಡಿಯೂರಪ್ಪ ನನಗೆ ಹಿರಿಯಣ್ಣನಿದ್ದಂತೆ: ಈಶ್ವರಪ್ಪ ಸ್ಪಷ್ಟನೆ, ರಾಜಕೀಯ  ಜರ್ನಿಗೆ ಹೊಸ ತಿರುವು?

ಯಡಿಯೂರಪ್ಪ ನನಗೆ ಹಿರಿಯಣ್ಣನಿದ್ದಂತೆ: ಈಶ್ವರಪ್ಪ ಸ್ಪಷ್ಟನೆ, ರಾಜಕೀಯ ಜರ್ನಿಗೆ ಹೊಸ ತಿರುವು?

by Shwetha
June 19, 2025
0

ಮಾಜಿ ಸಚಿವ ಹಾಗೂ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ತಮ್ಮ ಮಾತುಗಳಿಂದ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ನನಗೆ ಹಿರಿಯಣ್ಣನಂತೆ. ಅವರಿಗೂ...

ನಂದಿನಿ, ಅಮುಲ್… ಎರಡೂ ನಮ್ಮದೇ : ಸಿಟಿ ರವಿ ರಿಯಾಕ್ಷನ್

ನಂದಿನಿ, ಅಮುಲ್… ಎರಡೂ ನಮ್ಮದೇ : ಸಿಟಿ ರವಿ ರಿಯಾಕ್ಷನ್

by Shwetha
June 19, 2025
0

ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮತ್ತು ಅಮುಲ್ ಹಾಲು ಉತ್ಪನ್ನಗಳ ಕಿಯಾಸ್ಕ್‌ಗಳನ್ನು ಸ್ಥಾಪಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ ಬಳಿಕ, ಈ ವಿಚಾರವು ಚರ್ಚೆಗೆ ಕಾರಣವಾಗಿದೆ. ಈ...

ನಂದಿ ಬೆಟ್ಟದಲ್ಲಿ ನಡೆಯಬೇಕಿದ್ದ ಸಂಪುಟ ಸಭೆ ಕೊನೆ ಕ್ಷಣದಲ್ಲಿ ರದ್ದು: ಅಧಿಕಾರಿಗಳಲ್ಲಿ ನಿರಾಸೆ

ನಂದಿ ಬೆಟ್ಟದಲ್ಲಿ ನಡೆಯಬೇಕಿದ್ದ ಸಂಪುಟ ಸಭೆ ಕೊನೆ ಕ್ಷಣದಲ್ಲಿ ರದ್ದು: ಅಧಿಕಾರಿಗಳಲ್ಲಿ ನಿರಾಸೆ

by Shwetha
June 19, 2025
0

ರಾಜ್ಯದ ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿರುವ ನಂದಿಗಿರಿಧಾಮ (ನಂದಿ ಬೆಟ್ಟ)ದಲ್ಲಿ ಇಂದು ನಡೆಯಬೇಕಾಗಿದ್ದ ರಾಜ್ಯ ಸಚಿವ ಸಂಪುಟ ಸಭೆ, ಅಚ್ಚರಿಯ ತಿರುವು ಪಡೆದು ಕೊನೆ ಕ್ಷಣದಲ್ಲಿ ರದ್ದಾಗಿದೆ. ಮುಖ್ಯಮಂತ್ರಿ...

ದೇಶದಲ್ಲೇ ಮೊದಲ ಬಾರಿಗೆ ಬನ್ನೇರುಘಟ್ಟದಲ್ಲಿ ವಿದ್ಯುತ್ ಸಫಾರಿ ಬಸ್ ಚಾಲನೆ: ಶೀಘ್ರದಲ್ಲೇ 10 ವಿದೇಶೀ ವನ್ಯಜೀವಿಗಳ ಆಗಮನ

by Shwetha
June 19, 2025
0

ಬೆಂಗಳೂರು ಹೊರವಲಯದ ಪ್ರಸಿದ್ಧ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಮತ್ತೊಂದು ಮುನ್ನಡೆಯ ಹಂತ ತಲುಪಿದ್ದು, ದೇಶದಲ್ಲೇ ಮೊದಲ ಬಾರಿಗೆ ಇಲ್ಲಿಗೆ ವಿದ್ಯುತ್ ಚಾಲಿತ ಸಫಾರಿ ಬಸ್‌ ಪರಿಚಯಗೊಂಡಿದೆ. ಈ...

ನೀವು ತುಂಬಾ ಗ್ರೇಟ್… ನಾನು ನಿಮ್ಮಂತೆಯೇ ಆಗಲು ಯತ್ನಿಸುತ್ತೇನೆ: G7 ಶೃಂಗಸಭೆಯಲ್ಲಿ ಮೆಲೋನಿಯ ಮೋದಿ ಮೆಚ್ಚುಗೆ

ನೀವು ತುಂಬಾ ಗ್ರೇಟ್… ನಾನು ನಿಮ್ಮಂತೆಯೇ ಆಗಲು ಯತ್ನಿಸುತ್ತೇನೆ: G7 ಶೃಂಗಸಭೆಯಲ್ಲಿ ಮೆಲೋನಿಯ ಮೋದಿ ಮೆಚ್ಚುಗೆ

by Shwetha
June 19, 2025
0

ಇತ್ತೀಚೆಗೆ ಜರುಗಿದ G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ ನಡುವಿನ ಸೌಹಾರ್ದಭರಿತ ಭೇಟಿಯು ಸೋಶಿಯಲ್ ಮೀಡಿಯಾ ಮತ್ತು ರಾಜಕೀಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram