ಬೆಂಗಳೂರು ; ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಡಿನ ಸಮಸ್ತ ಜನತೆಗೆ“ವಿಶ್ವ ಪರಿಸರ ದಿನ’ದ ಶುಭಾಶಯಗಳು ತಿಳಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ ಅವರು,ಪ್ರಕೃತಿಯು ತಾಯಿಯಂತೆ ಮನುಷ್ಯನಿಗೆ ಸರ್ವಸ್ವವನ್ನೂ ನೀಡಿ ಸಲಹುತ್ತದೆ.
ಇಂತಹ ನಿರ್ವಾಜ ಪ್ರೀತಿಯ ಅಮೂಲ್ಯ ಪರಿಸರ ಸಂಪತ್ತನ್ನು ಉಳಿಸಿ ಬೆಳೆಸೋಣ. ಎಲ್ಲರಿಗೂ ಪರಿಸರದ ಮಹತ್ವವನ್ನು ಸಾರೋಣ. ಕೊರೊನ ಸೋಂಕಿನ ಈ ದಿನಗಳಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಪಣ ತೊಡೋಣ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮನವಿ ಮಾಡಿದ್ದಾರೆ.
ಸಚಿವ ಸಿ.ಟಿ. ರವಿ ಸಹ ವಿಶ್ವ ಪರಿಸರದ ಶುಭಾಶಯಗಳನ್ನು ತಿಳಿಸಿದದ್ದಾರೆ.ಮಾನವ ಪರಿಸರದ ಅಂಗ, ಪರಿಸರವಿಲ್ಲದೆ ಮಾನವನ ಅಸ್ತಿತ್ವವೇ ಇಲ್ಲ. ಪರಿಸರವನ್ನು ರಕ್ಷಿಸಿ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ನಮ್ಮ ಹಾಗು ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯದ ನಾಳೆಗಳಿಗಾಗಿ ವರ್ಷದ ಪ್ರತಿ ದಿನವೂ ನಮ್ಮೆಲ್ಲರಿಗೂ ಪರಿಸರ ದಿನವಾಗಬೇಕು. ಪರಿಸರ ಉಳಿಸಿ ಎಲ್ಲಾ ಜೀವರಾಶಿಗಳ ಬದುಕನ್ನು ಹಸಿರಾಗಿಸೋಣ ಎಂದು ಹೇಳಿದ್ದಾರೆ.








