Har Ghar Tiranga – ಯಾತ್ರೆ ವೇಳೆ ಮಾಜಿ ಉಪಮುಖ್ಯಮಂತ್ರಿಗೆ ಗುದ್ದಿದ ಗೂಳಿ…
ಶನಿವಾರ ಗುಜರಾತ್ನ ಮೆಹ್ಸಾನಾದಲ್ಲಿ ಹರ್ ಘರ್ ತಿರಂಗ ಯಾತ್ರೆ ನೇತೃತ್ವ ವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನ ಬಿಡಾಡಿ ಹಸು ಗುದ್ದಿದ ಘಟನೆ ನಡೆದಿದೆ. ಜನಸಂದಣಿಯೊಳಗೆ ನುಗ್ಗಿದ ಹಸು ಗಾಬರಿಗೊಂಡು ಅನೇಕ ಜನರನ್ನ ತಳ್ಳಿದೆ. ಈ ವೇಳೆ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಸೇರಿದಂತೆ ಹಲವರು ಕೆಳಗೆ ಬಿದ್ದಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಉಸ್ತುವಾರಿ ಸರಳ್ ಪಟೇಲ್ ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Stray cow attacks Gujarat's former Deputy CM Nitin Patel during "Har Ghar Tiranga" yatra in Mehsana. pic.twitter.com/pwlmqRi7nT
— Saral Patel (@SaralPatel) August 13, 2022
ಗುಜರಾತ್ ಆಮ್ ಆದ್ಮಿ ಪಕ್ಷದ ನಾಯಕ ಡಾ.ತೋಹಿದ್ ಆಲಂಖಾನ್ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಎಡಗಾಲು ಗಾಯಗೊಂಡಿರುವ ನಿತಿನ್ ಪಟೇಲ್ ಗಾಲಿಕುರ್ಚಿಯಲ್ಲಿರುವ ಫೋಟೋವನ್ನು ಅವರು ತಮ್ಮ ಟ್ವೀಟ್ಗೆ ಸೇರಿಸಿದ್ದಾರೆ. ಈ ಅಪಘಾತಕ್ಕೆ ಯಾರು ಹೊಣೆ? ಎಂದು ಎಎಪಿ ನಾಯಕ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮನೆ ಮನೆಗೆ ತ್ರಿವರ್ಣ ಧ್ವಜ ಹಾರಿಸಲು ಕರೆ ನೀಡಿದೆ. ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದ ನಂತರ 20 ಕೋಟಿ ರಾಷ್ಟ್ರಧ್ವಜಗಳು ಲಭ್ಯವಾಗಿವೆ ಎಂದು ಸರ್ಕಾರಿ ಮೂಲಗಳು ಹೇಳುತ್ತವೆ.