Har Ghar Tiranga | ರಾಜ್ಯದಾದ್ಯಂತ ತಿರಂಗಾ ಮೆರವಣಿಗೆ
ಬಾಗಲಕೋಟೆ : ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆಯಲ್ಲಿ ಬಾಗಲಕೋಟೆಯ ಬಿವಿವಿ ಸಂಘದಿಂದ ಐದು ನೂರು ಮೀಟರ್ ತಿರಂಗಾ ಮೆರವಣಿಗೆ ನಡೆಸಲಾಯಿತು.
ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಿಂದ ಆರಂಭವಾದ ಮೆರವಣಿಗೆಗೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು. ಬೋಲೋ ಭಾರತ್ ಮಾತಾ ಕಿ ಎಂಬ ಘೋಷಣೆಗಳನ್ನು ಕೂಗುತ್ತಾ, ತಿರಂಗಾ ಹೊತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
ಇತ್ತ ಸಕ್ಕರೆ ನಾಡು ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಮೆರವಣಿಗೆ ನಡೆಯಿತು. ತಾಲೂಕು ಆಡಳಿತದಿಂದ ನಡೆದ ಮೆರವಣಿಗೆಗೆ ಸಚಿವ ನಾರಾಯಣಗೌಡ ಚಾಲನೆ ನೀಡಿದರು. ಮೆರವಣಿಗೆಯಲ್ಲಿ 10 ಸಾವಿರ ಮಂದಿ ಶಾಲೆ-ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ರಾಯರ ಆರಾಧನೆಯಲ್ಲೂ ತಿರಂಗಾ ಮಿಂಚಿಂಗ್.. ಹೌದು ಶ್ರೀ ಗುರುರಾಯರ ಆರಾಧನಾ ಮಹೋತ್ಸವ ನಿನ್ನೆಯಿಂದ ಶುರುವಾಗಿದ್ದು ಇವತ್ತು ಎರಡನೇ ದಿನದ ಸಡಗರ ಸಂಭ್ರಮ ಜೋರಾಗಿದೆ..ಇತ್ತ ಕಲಬುರಗಿಯ ಜಗತ್ ಬಡಾವಣೆಯಲ್ಲಿರುವ ರಾಯರ ಮಠದಲ್ಲೂ ಆರಾಧನಾ ಮಹೋತ್ಸವ ನಿಮಿತ್ಯ ಇವತ್ತು ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.. ಈ ವೇಳೆ ಮಕ್ಕಳ ಕೋಲಾಟ ಮಹಿಳೆಯರಿಂದ ಶೋಭಾಯಾತ್ರೆ ನಡೆಯಿತು.ಇದೇ ಶೋಭಾಯಾತ್ರೆಯಲ್ಲಿ ತಿರಂಗ ಧ್ವಜ ಹಿಡಿದ ಮಕ್ಕಳು 75 ನೇ ಅಮೃತ ಮಹೋತ್ಸವ ಹಿನ್ನಲೆ ದೇಶಾಭಿಮಾನ ಮೆರೆದರು..