ಗದಗ: ಯುವತಿ, ಮಹಿಳೆಯರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸರೇ ಕಿರುಕುಳ ನೀಡಿದರೆ, ರಕ್ಷಿಸುವವರು ಯಾರು? ಇಂತಹ ಘಟನೆಯೊಂದು ಬೆಳಕಿಗೆ ಬಂದಿದ್ದು, ಕಾಲೇಜು ವಿದ್ಯಾರ್ಥಿನಿಗೆ ನರೇಗಲ್ ಪಿಎಸ್ಐ (PSI) ಕಿರುಕುಳ ನೀಡಿರುವ ಆರೋಪವೊಂದು ಕೇಳಿ ಬಂದಿದೆ.
ನರೇಗಲ್ ಪೊಲೀಸ್ ಠಾಣೆಯ ಪಿಎಸ್ಐ ನಿಖಿಲ್ ಕಾಂಬ್ಳೆ, ಕಾನ್ಸ್ಟೇಬಲ್ ಶಂಕರ್ ನಾಲಕರ್ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಆರೋಪವನ್ನು ವಿದ್ಯಾರ್ಥಿನಿ ಮಾಡಿದ್ದಾರೆ. ಕಾಲೇಜಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅನುಚಿತ ವರ್ತನೆ ತೋರಿದ್ದಾರೆ. ನರೇಗಲ್ ಬಸ್ ನಿಲ್ದಾಣ ಹಾಗೂ ಪೊಲೀಸ್ ಠಾಣೆ ಹತ್ತಿರ ಕಿರುಕುಳ ನೀಡಿದ್ದಾರೆ. ನಂಬರ್ ಪಡೆದು, ಹಣ ಕೊಡುತ್ತೇವೆ ಬಾ ಎಂದು ಕಾನ್ಸ್ಟೇಬಲ್ ಶಂಕರ್ ನಾಲಕರ್ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಾರೆ. ಈ ಕುರಿತು ದೂರು ನೀಡುವುದಾಗಿ ತಿಳಿಸಿದರೂ ಕಿರುಕುಳ ನೀಡಿದ್ದಾರೆ ಎದು ಯುವತಿ ಆರೋಪಿಸಿದ್ದಾರೆ. ಅಲ್ಲದೇ, ರಕ್ಷಣೆ ನೀಡುವಂತೆ ಯುವತಿ ಮನವಿ ಮಾಡಿದ್ದಾರೆ.








