Shubman-gill | ಟೀಂ ಇಂಡಿಯಾದ ಭವಿಷ್ಯದ ನಾಯಕ ಶುಭ್ ಮನ್ ಗಿಲ್
ಟೀಂ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್ ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯುನ್ನತ ಫಾರ್ಮ್ನಲ್ಲಿದ್ದಾರೆ.
ಕಳೆದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರಿಸಿದ್ದ ಗಿಲ್, ಇತ್ತೀಚೆಗೆ ನಡೆದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಮತ್ತೆ ಆರ್ಭಟಿಸಿದ್ದರು.
ಸೋಮವಾರ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ ಅದ್ಭುತ ಶತಕ ಬಾರಿಸಿದ್ರು. ಈ ಮೂಲಕ ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕ ದಾಖಲಿಸಿದರು.
ಈ ಹಿನ್ನೆಲೆಯಲ್ಲಿ ಗಿಲ್ ಬಗ್ಗೆ ಭಾರತದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಗಿಲ್ ಅವರು ಟೀಂ ಇಂಡಿಯಾದ ಭವಿಷ್ಯದ ನಾಯಕ ಎಂದು ಶ್ಲಾಘಿಸಿದ್ದಾರೆ.
ಅದೇ ರೀತಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ರಂತಹ ಸ್ಟಾರ್ ಆಟಗಾರರ ಶೈಲಿಯಲ್ಲಿ ಗಿಲ್ ಆಡುತ್ತಿದ್ದಾರೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.
“ಗಿಲ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರ ಬ್ಯಾಟಿಂಗ್ ತಂತ್ರ ಮತ್ತು ಶಾಟ್ ಆಯ್ಕೆ ಎರಡೂ ಅತ್ಯುತ್ತಮವಾಗಿದೆ.
ಬ್ಯಾಟಿಂಗ್ ಶೈಲಿಯಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಾಹುಲ್ಗೆ ಗಿಲ್ ಅವರನ್ನು ಹೋಲಿಸಬಹುದು.
![Harbhajan-singh-praise-shubman-gill saaksha tv](http://saakshatv.com/wp-content/uploads/2022/07/gill-300x236.jpg)
ಅವರೇ ಭವಿಷ್ಯದ ನಾಯಕ ಎಂದು ನಾನು ಭಾವಿಸುತ್ತೇನೆ. ಕ್ಯಾಪ್ಟನ್ ಆಫ್ ಇಂಡಿಯಾ. ಅವರಿಗೆ ನಾಯಕನಾಗಿ ಅನುಭವ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಅವರು ಉತ್ತಮ ನಾಯಕರಾಗುತ್ತಾರೆ. ಕಲಿಯಲು ಅವಕಾಶವಿದೆ” ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ 130 ರನ್ ಗಳಿಸಿ ಅಪರೂಪದ ದಾಖಲೆ ಮಾಡಿದ್ದಾರೆ. ಇದು ಜಿಂಬಾಬ್ವೆ ನೆಲದಲ್ಲಿ ಭಾರತೀಯ ಆಟಗಾರ ದಾಖಲಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ..
ಈ ಹಿಂದೆ ಈ ದಾಖಲೆ ಟೀಂ ಇಂಡಿಯಾದ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. 1998 ರಲ್ಲಿ, ಸಚಿನ್ ಬುಲವಾಯೊದಲ್ಲಿ ಜಿಂಬಾಬ್ವೆ ವಿರುದ್ಧದ ODI ನಲ್ಲಿ 127 ರನ್ ಗಳಿಸಿದ್ದರು. ಇತ್ತೀಚಿನ ಪಂದ್ಯದಲ್ಲಿ ಗಿಲ್ ಸಚಿನ್ ಅವರ 24 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.