Hardik Pandya | ಐಪಿಎಲ್ ಆಯ್ತು ಮುಂದಿನ ನನ್ನ ಗುರಿ ವಿಶ್ವಕಪ್
ಟೀಂ ಇಂಡಿಯಾದ ರಾಕ್ ಸ್ಟಾರ್ ಹಾರ್ದಿಕ್ ಪಾಂಡ್ಯ ಸದ್ಯ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬ್ಯಾಡ್ ಫಾರ್ಮ್, ಇಂಚೂರಿಯಿಂದಾಗಿ ಬಳಲುತ್ತಿದ್ದ ಹಾರ್ಧಿಕ್ ಪಾಂಡ್ಯ ಇದೀಗ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿದ್ದಾರೆ.
15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಹಾರ್ಧಿಕ್ ಪಾಂಡ್ಯ, ಯಾರೂ ಊಹಿಸದ ರೀತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾದರು. ಕೇವಲ ಕ್ಯಾಪ್ಟನ್ ಆಗಿದ್ದು ಮಾತ್ರವಲ್ಲದೇ ತಂಡವನ್ನು ಚೊಚ್ಚಲ ಪ್ರಯತ್ನದಲ್ಲಿಯೇ ಗುಜರಾತ್ ಟೈಟಾನ್ಸ್ ಗೆ ಟೈಟಲ್ ಗೆದ್ದುಕೊಟ್ಟಿದ್ದಾರೆ.
ಕಳೆದ ಐಪಿಎಲ್ ಸೀಸನ್ ನಲ್ಲಿ ಕೆಟ್ಟ ಪರಿಸ್ಥಿತಿ ಎದುರಿಸಿದ್ದ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಫಿಟ್ನೆಸ್ ಕೊರತೆಯಿಂದ ಟೀ ಮಿಂಡಿಯಾದಿಂದ ಕೂಡ ಔಟ್ ಆಗಿದ್ದರು.
ಇನ್ನೇನು ಹಾರ್ದಿಕ್ ಕೆರಿಯರ್ ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ ಗುಜರಾತ್ ಟೈಟಾನ್ಸ್ ಮೂಲಕ ಹಾರ್ದಿಕ್ ಪಾಂಡ್ಯಗೆ ಅದೃಷ್ಠದ ಬಾಗಿಲು ತೆರೆಯಿತು. ಗುಜರಾತ್ ತಂಡವನ್ನು ಉತ್ತಮವಾಗಿ ಮುಂದುವರೆಸಿದ ಹಾರ್ದಿಕ್ ಪಾಂಡ್ಯ ಚಾಂಪಿಯನ್ ಮಾಡಿದ್ದು ಇದೀಗ ಇತಿಹಾಸ.
ಕೇವಲ ಒಬ್ಬ ನಾಯಕನಾಗಿ ಮಾತ್ರವಲ್ಲದೆ ಹಾರ್ದಿಕ್ ವ್ಯಕ್ತಿಗತವಾಗಿಯೂ ಐಪಿಎಲ್ ನಲ್ಲಿ ಮಿಂಚು ಹರಿಸಿದರು. ಒಬ್ಬ ವೇಗದ ಬೌಲಿಂಗ್ ಆಲ್ ರೌಂಡರ್ಆಗಿ ಹಾರ್ದಿಕ್ ಅದ್ಭುತ ಪ್ರದರ್ಶನ ನೀಡಿದರು.

ಈ ಬಾರಿಯ ಐಪಿಎಲ್ ನಲ್ಲಿ ಹಾರ್ದಿಕ್ ಪಾಂಡ್ಯ 15 ಪಂದ್ಯಗಳನ್ನಾಡಿದ್ದು, 44.27 ಸರಾಸರಿಯಲ್ಲಿ 487 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 131.27 ಇದೆ. ಅವರು ಈ ಸೀಸನ್ ನಲ್ಲಿ 4 ಅರ್ಧಶತಕಗಳನ್ನು ಸಿಡಿಸಿದ್ದು, 49 ಬೌಂಡರಿ, 12 ಸಿಕ್ಸರ್ ಗಳನ್ನ ಬಾರಿಸಿದ್ದಾರೆ. ಅಲ್ಲದೇ ಬೌಲಿಂಗ್ ನಲ್ಲಿ 8 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
ಈ ಪ್ರದರ್ಶನದ ಹಿನ್ನಲೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತೆ ಟೀಂ ಇಂಡಿಯಾಗೆ ಆಯ್ಕೆ ಆಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಹಾರ್ದಿಕ್ ಆಯ್ಕೆ ಆಗಿದ್ದು, ತಂಡದ ವೈಸ್ ಕ್ಯಾಪ್ಟನ್ ಆಗಿದ್ದಾರೆ. ದೆಹಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಮಿಂಚಿನ 31 ರನ್ ಗಳಿಸಿದ್ದರು.
ಇನ್ನು ಟೀಂ ಇಂಡಿಯಾಗೆ ವಾಪಸ್ ಆಗಿರುವ ಬಗ್ಗೆ ಹಾರ್ದಿಕ್ ಮಾತನಾಡಿದ್ದು, ದೇಶಕ್ಖಾಗಿ ಆಡುವುದು ಯಾವಗಲೂ ವಿಶೇಷವಾಗಿರುತ್ತದೆ. ಸಾಕಷ್ಟು ಸಮಯದ ಬಳಿಕ ಟೀಂ ಇಂಡಿಯಾಗೆ ವಾಪಸ್ ಆಗಿರೋದು ಹೊಸ ಉತ್ಸಾಹ ನೀಡಿದೆ.
ಉತ್ತಮ ಪ್ರದರ್ಶನ ನೀಡಲು ಉತ್ಸುಕನಾಗಿದ್ದೇನೆ. ಒಬ್ಬ ಕ್ರಿಕೆಟ್ ಆಟಗಾರನಾಗಿ ಐಪಿಎಲ್ ನಲ್ಲಿ ನಾನು ನೀಡಿದ ಪ್ರದರ್ಶನ ತೃಪ್ತಿ ತಂದಿದೆ. ಪ್ರತಿ ಪಂದ್ಯವನ್ನ ನನ್ನ ಕೊನೆಯ ಪಂದ್ಯ ಎಂಬಂತೆ ಆಡಲು ಬಯಸುತ್ತೇನೆ. ವಿಶ್ವಕಪ್ ನನ್ನ ಗುರಿಯಾಗಿದೆ ಎಂದು ತಿಳಿಸಿದ್ದಾರೆ.