Hardik Pandya | ಹಾರ್ದಿಕ್ ಪಾಂಡ್ಯ ಬಗ್ಗೆ ಆಶಿಶ್ ನೆಹ್ರಾ ಅಸಮಾಧಾನ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಸೋಲು ಕಂಡಿದೆ.
ಟೀಂ ಇಂಡಿಯಾ ಇನ್ನಿಂಗ್ಸ್ ನ ಅಂತಿಮ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರ ನಡೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಸಿಂಗಲ್ ತೆಗೆದುಕೊಳ್ಳಲು ಅವಕಾಶ ಇದ್ದರೂ ದಿನೇಶ್ ಕಾರ್ತಿಕ್ಗೆ ಸ್ಟ್ರೈಕ್ ನೀಡಲು ಹಾರ್ದಿಕ್ ನಿರಾಕರಿಸಿದರು. ಈ ವಿಚಾರದಲ್ಲಿ ಹಾರ್ದಿಕ್ ವರ್ತನೆಗೆ ನೆಟ್ಟಿಗರು ಟೀಕೆ ಮಾಡಿದ್ದಾರೆ.
ಈ ಬಗ್ಗೆ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಪ್ರತಿಕ್ರಿಯಿಸಿದ್ದಾರೆ. ಅಂತಿಮ ಓವರ್‌ನಲ್ಲಿ ಐದನೇ ಎಸೆತದಲ್ಲಿ ಪಾಂಡ್ಯ ಅವರು ದಿನೇಶ್ ಕಾರ್ತಿಕ್ಗೆ ಸ್ಟ್ರೈಕ್ ನೀಡಬೇಕಿತ್ತು ಎಂದು ಭಾರತದ ಮಾಜಿ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ.
“ಪಾಂಡ್ಯ ಕೊನೆಯ ಓವರ್‌ನಲ್ಲಿ ಸಿಂಗಲ್ ತೆಗೆದುಕೊಳ್ಳಬೇಕಿತ್ತು. ದಿನೇಶ್ ಕಾರ್ತಿಕ್ ಇನ್ನೊಂದು ತುದಿಯಲ್ಲಿದ್ದರು. ನಾನು ಅಲ್ಲಿರಲಿಲ್ಲ ಅಲ್ಲವೇ?” ಆಶಿಶ್ ನೆಹ್ರಾ ಲೇವಡಿ ಮಾಡಿದರು.
ನಡೆದಿದ್ದು ಏನು..?
ಭಾರತದ ಇನಿಂಗ್ಸ್ ನ ಅಂತಿಮ ಓವರ್‌ನಲ್ಲಿ ಅರ್ನಿಜ್ ನೋರ್ಟಜೆ ಬೌಲಿಂಗ್ ನ ಮೊದಲ ಎಸೆತದಲ್ಲಿ ನಾಯಕ ರಿಷಬ್ ಪಂತ್ ಪೆವಿಲಿಯನ್ ಸೇರಿದರು.
ನಂತರ ದಿನೇಶ್ ಕಾರ್ತಿಕ್ ಕ್ರೀಸ್‌ಗೆ ಬಂದರು. ಕಾರ್ತಿಕ್ ಆಡಿದ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ನಂತರ ಮೂರನೇ ಎಸೆತಕ್ಕೆ ಸಿಂಗಲ್ ತೆಗೆದು ಹಾರ್ದಿಕ್ಗೆ ಸ್ಟ್ರೈಕ್ ನೀಡಿದರು.
ಪಾಂಡ್ಯ ನಾಲ್ಕನೇ ಎಸೆತದಲ್ಲಿ ಲಾಂಗ್ ಆಫ್ ಕಡೆಗೆ ಬೃಹತ್ ಸಿಕ್ಸರ್ ಬಾರಿಸಿದರು. ಆದರೆ, ಐದನೇ ಎಸೆತದಲ್ಲಿ ಸಿಂಗಲ್ ಗಳಿಸುವ ಸಾಧ್ಯತೆ ಇದ್ದರೂ ಹಾರ್ದಿಕ್ ತೆಗೆದುಕೊಳ್ಳಲಿಲ್ಲ.
ಇನ್ನು ಕೊನೆಯ ಎಸೆತದಲ್ಲಿ ಹಾರ್ದಿಕ್ ದೊಡ್ಡ ಹೊಡೆತಕ್ಕೆ ಯತ್ನಿಸಿದ್ರೂ ಎರಡು ರನ್ ಮಾತ್ರ ಗಳಿಸಿದರು.